Advertisement
ಮಂಗಳೂರು ನಗರದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಬಳಿಕ ಉತ್ತಮ ಮಳೆ ಸುರಿದಿದೆ. ದ.ಕ. ಜಿಲ್ಲೆಯಲ್ಲಿ ಶನಿವಾರಕ್ಕೆ ಹೋಲಿಸಿದರೆ ಮಳೆಯ ತೀವ್ರತೆ ತುಸು ಕಡಿಮೆ ಇತ್ತು. ಗಾಳಿಗೆ ನಗರದ ಕದ್ರಿ ಬಳಿ ವಾಹನಕ್ಕೆ ಮರ ಬಿದ್ದಿದೆ.
Related Articles
ಉಡುಪಿ ಜಿಲ್ಲೆಯಲ್ಲಿ ರವಿವಾರ ಹಲವೆಡೆ ಉತ್ತಮ ಮಳೆಯಾಗಿದೆ. ಬೈಂದೂರು, ಕುಂದಾಪುರ ಹೆಚ್ಚು ಮಳೆಯಾಗಿದ್ದು, ಶನಿವಾರ ತಡರಾತ್ರಿ, ರವಿವಾರ ಬಿಟ್ಟುಬಿಟ್ಟು ನಿರಂತರ ಮಳೆ ಸುರಿದಿದ್ದು, ಉಡುಪಿ, ಮಣಿಪಾಲ, ಮಲ್ಪೆ ಪರಿಸರದಲ್ಲಿ ಮಧ್ಯಾಹ್ನ ಅನಂತರ ಕೆಲಕಾಲ ಮಳೆ ಸುರಿದಿದೆ.
Advertisement
ಶನಿವಾರ ತಡರಾತ್ರಿ ಸುರಿದ ಗಾಳಿಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ಜಿಲ್ಲೆಯ ಗುಜ್ಜಾಡಿ, ಶಂಕರನಾರಾಯಣ, ಹೊಸಂಗಡಿ,ಕನ್ಯಾನ, ತೆಕ್ಕಟ್ಟೆ, ಗಂಗೊಳ್ಳಿ, ಕಳತ್ತೂರು, ಮೂಡಬೆಟ್ಟು, ಹೆಜಮಾಡಿ, ಬಿಜೂರು, ಉಪ್ಪುಂದ, ಉಳ್ಳೂರು, ಅಂಬಲಪಾಡಿಯಲ್ಲಿ 17 ಮನೆಗಳಿಗೆ ಹಾನಿ ಸಂಭವಿಸಿದೆ.