Advertisement

ಹವಾಮಾನ ಮಾಪಕ ಅಂತೂ ಸ್ಥಳಾಂತರ

08:20 AM May 18, 2018 | Team Udayavani |

ಉಪ್ಪಿನಂಗಡಿ: ನಿರ್ಲಕ್ಷ್ಯಕ್ಕೆ ತುತ್ತಾಗಿ ಅತಂತ್ರವಾಗಿದ್ದ ಹವಾಮಾನ ಮಾಪಕದ ಬಗ್ಗೆ ‘ಸುದಿನ’ದಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಜಲಾನಯನ ಇಲಾಖೆಯು ಉಪಕರಣವನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಿದೆ. ಹಲವು ವರ್ಷಗಳಿಂದ ಉಪ್ಪಿನಂಗಡಿಯ ಸರಕಾರಿ ಆಸ್ಪತ್ರೆ ವಠಾರದಲ್ಲಿ ಅಳವಡಿಸಲಾದ ಮಳೆ ಮಾಪಕ ಹಾಗೂ ಹವಾಮಾನ ಮಾಪಕಗಳನ್ನು ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿ ಕಟ್ಟಡ ಕಾಮಗಾರಿ ನಡೆದಾಗ ಸ್ಥಳಾಂತರಿಸುವ ಅನಿವಾರ್ಯತೆ ಮೂಡಿತ್ತು. ಆದರೆ ಮಳೆ ಮಾಪಕವನ್ನು ಸ್ಥಳಾಂತರಿಸಲು ಇಲಾಖೆ ನಿರ್ಲಕ್ಷ್ಯ ತೋರಿದಾಗ ಪತ್ರಿಕೆ ಸಚಿತ್ರ ವರದಿ ಪ್ರಕಟಿಸಿ, ಇಲಾಖೆಯ ಗಮನ ಸೆಳೆದಿತ್ತು.

Advertisement

ವರದಿಗೆ ಸ್ಪಂದಿಸಿದ ಇಲಾಖೆ, ಮಳೆ ಮಾಪಕವನ್ನು ಮಾತ್ರ ಉಪ್ಪಿನಂಗಡಿ ಬಸ್‌ ನಿಲ್ದಾಣದ ಬಳಿಯ ಕಂದಾಯ ಇಲಾಖೆ ನಿವೇಶನಕ್ಕೆ ಸ್ಥಳಾಂತರಿಸಿತ್ತು. ಆದರೆ ಹವಾಮಾನ ಹಾಗೂ ವಾಯುಭಾರ ಮಾಪಕದ ಸಾಧನಗಳೆಲ್ಲವೂ ಆಸ್ಪತ್ರೆಯ ಆವರಣದಲ್ಲಿ ಅತಂತ್ರವಾಗಿ ಉಳಿದಿದ್ದವು. ಇದು ಗುಜರಿ ಹೆಕ್ಕುವವರ ಕೈವಶವಾಗುವ ಸಾಧ್ಯತೆಯನ್ನು ಮನಗಂಡು ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತ ಜಲಾನಯನ ಇಲಾಖೆ, ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಹವಾಮಾನ ಹಾಗೂ ವಾಯುಭಾರ ಮಾಪಕವನ್ನು ಉಪ್ಪಿನಂಗಡಿ ಬಸ್‌ ನಿಲ್ದಾಣ ಪರಿಸರದ ಮಳೆ ಮಾಪಕ ಕೇಂದ್ರಕ್ಕೆ ಸ್ಥಳಾಂತರಿಸಿ, ಮಾಪಕ ಸದ್ಬಳಕೆಯಾಗುವಂತೆ ನೋಡಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next