Advertisement
ಇನ್ನಿಂಗ್ಸ್ ಬ್ರೇಕ್ ವೇಳೆ ಮಳೆ ಸುರಿದ ಕಾರಣ ಆಟವನ್ನು ಮುಂದು ವರಿಸ ಲಾಗಲಿಲ್ಲ. ಪಂದ್ಯದ ಆರಂಭದ ವೇಳೆಯೂ ಮಳೆಯಿಂದ ಅಡ್ಡಿ ಯಾ ಗಿತ್ತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 177 ರನ್ ಗಳಿಸಿತ್ತು. ಇದರಿಂದ ದಕ್ಷಿಣ ಆಫ್ರಿಕಾ 1-0 ಮುನ್ನಡೆ ಕಾಯ್ದುಕೊಂಡಿದೆ. 3ನೇ ಹಾಗೂ ನಿರ್ಣಾಯಕ ಪಂದ್ಯ ಮಂಗಳವಾರ ನಡೆಯಲಿದೆ.
ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ್ತಿ ತಾಜ್ಮಿನ್ ಬ್ರಿಟ್ಸ್ ಸತತ 2ನೇ ಅರ್ಧ ಶತಕದ ಮೂಲಕ ಮಿಂಚಿದರು. ಮೊದಲ ಪಂದ್ಯದಲ್ಲಿ 81 ರನ್ ಮಾಡಿದ್ದ ಬ್ರಿಟ್ಸ್, ಇಲ್ಲಿ 39 ಎಸೆತಗಳಿಂದ 52 ರನ್ ಬಾರಿಸಿದರು. ಇದು 6 ಬೌಂಡರಿ ಹಾಗೂ ದಕ್ಷಿಣ ಆಫ್ರಿಕಾ ಸರದಿಯ ಏಕೈಕ ಸಿಕ್ಸರನ್ನು ಒಳಗೊಂಡಿತ್ತು. ಲಾರಾ ವೋಲ್ವಾರ್ಟ್ (22) ಮತ್ತು ಬ್ರಿಟ್ಸ್ ಬಿರುಸಿನ ಆರಂಭ ಒದಗಿಸಿದರು. ಮೊದಲ ವಿಕೆಟಿಗೆ 4.1 ಓವರ್‌ಗಳಿಂದ 43 ರನ್ ಒಟ್ಟುಗೂಡಿತು. ಮಧ್ಯಮ ಕ್ರಮಾಂಕದ ಆಟಗಾರ್ತಿ ಆ್ಯನೆಕ್ ಬಾಶ್ 40 ರನ್ ಹೊಡೆದರು (32 ಎಸೆತ, 6 ಬೌಂಡರಿ). ಇವರ ವಿಕೆಟ್ ಶ್ರೇಯಾಂಕಾ ಪಾಟೀಲ್ ಪಾಲಾಯಿತು. ಬಾಶ್ ಕ್ಲೀನ್ ಬೌಲ್ಡ್ ಆಗಿ ವಾಪಸಾದರು. ದೀಪ್ತಿ ಶರ್ಮ ಮತ್ತು ಪೂಜಾ ವಸ್ತ್ರಾಕರ್ ತಲಾ 2 ವಿಕೆಟ್ ಉರುಳಿಸಿದರು. ಗಾಯಾಳು ವಿಕೆಟ್ ಕೀಪರ್ ರಿಚಾ ಘೋಷ್ ಹೊರಗುಳಿದರು. ಉಮಾ ಛೇತ್ರಿ ಟಿ20 ಕ್ಯಾಪ್ ಧರಿಸಿದರು.