Advertisement

ಮಹಾರಾಷ್ಟ್ರಕ್ಕೆ ಅಪ್ಪಳಿಸಿದ ಮಳೆ: ಪಾಲ್ಘರ್, ನಾಸಿಕ್‌ನಲ್ಲಿ ಭೂಕುಸಿತ, ರೆಡ್‌ ಅಲರ್ಟ್‌

10:31 PM Jul 13, 2022 | Team Udayavani |

ನವದೆಹಲಿ/ಮುಂಬೈ: ರಾಷ್ಟ್ರರಾಜಧಾನಿ ನವದೆಹಲಿ, ಮಹಾರಾಷ್ಟ್ರ, ಗುಜರಾತ್‌, ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ.

Advertisement

ಮಂಗಳವಾರ-ಬುಧವಾರ ನಡುವಿನ 24 ಗಂಟೆಗಳಲ್ಲಿ ಈ ರಾಜ್ಯಗಳಲ್ಲಿ 18 ಮಂದಿ ಮಳೆ ಸಂಬಂಧಿತ ಅವಗಢಗಳಲ್ಲಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್, ನಾಸಿಕ್‌ಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಅತ್ತ, ಗುಜರಾತ್‌, ನವದೆಹಲಿ, ತೆಲಂಗಾಣ, ಹಿಮಾಚಲ ಪ್ರದೇಶಗಳಲ್ಲೂ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಪಾಲ್ಗಾರ್‌, ನಾಸಿಕ್‌ಗೆ “ರೆಡ್‌ ಅಲರ್ಟ್‌’
ಮಹಾರಾಷ್ಟ್ರದ ಪಾಲ್ಗಾರ್‌, ನಾಸಿಕ್‌ಗಳಲ್ಲಿ ಮತ್ತಷ್ಟು ಮಳೆ ಸುರಿಯುವ ಸಾಧ್ಯತೆಗಳಿವೆ ಎಂದಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಆ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಿದೆ.

ಜೊತೆಗೆ, ಮುಂದಿನ ಮೂರು ನಾಲ್ಕು ದಿನಗಳವರೆಗೆ ಮುಂಬೈ, ಥಾಣೆ ಸೇರಿ 8 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಪಾಲ್ಗಾರ್‌ ಜಿಲ್ಲೆಯ ವಾಸೈ ಎಂಬ ಕಡೆ ಸಂಭವಿಸಿದ ಭೂಕುಸಿತದಲ್ಲಿ ತಂದೆ ಮತ್ತು ಮಗಳು ಮೃತಪಟ್ಟಿದ್ದಾರೆ.

ಪುಣೆಯಲ್ಲಿ ಮುಥಾ ನದಿಯಲ್ಲಿ ನಾಲ್ವರು ಕೊಚ್ಚಿಕೊಂಡು ಹೋಗಿದ್ದಾರೆ. ನಾಸಿಕ್‌ ಜಿಲ್ಲೆಯಲ್ಲಿ ವಿವಿಧ ಘಟನೆಗಳಲ್ಲಿ ಆರು ಜನರು ನದಿ ಅಥವಾ ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆಗಳು ಜರುಗಿವೆ. ಇದರೊಂದಿಗೆ, ಈ ಬಾರಿಯ ಮಳೆಯಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ 89ಕ್ಕೇರಿದೆ.

Advertisement

ಮುಂಬೈ ಹಾಗೂ ಅದರ ಸುತ್ತಲಿನ ಸ್ಥಳಗಳಲ್ಲಿ ಏಕಾಏಕಿ ಸುರಿದ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಭಾರೀ ತೊಂದರೆ ಉಂಟಾಗಿದೆ. ರೈಲು, ಬಸ್ಸುಗಳ ಸಂಚಾರಕ್ಕೂ ಅಡಚಣೆಯಾಗಿದ್ದು ಜನರು ಪರದಾಡುವಂತಾಗಿದೆ. ಗಾಡಿcರೋಲಿಯಲ್ಲಿ 24 ಗಂಟೆಗಳಲ್ಲಿ 97.1 ಮಿ.ಮೀಟರ್‌ ಮಳೆಯಾಗಿದ್ದು, ಸುಮಾರು 2000 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜು. 16ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಿಂಗೋಲಿ ಜಿಲ್ಲೆಯ ಕುರುಂಡಾ ಎಂಬ ಹಳ್ಳಿಯು ಜಲಾವೃತ ವಾಗಿರುವುದರಿಂದ ನಾಲ್ಕು ದಿನಗಳಿಂದ ಊಟವಿಲ್ಲದೆ ಜನರು ಪರದಾಡುವಂಥ ಪರಿಸ್ಥಿತಿ ಬಂದೊದಗಿದೆ.

ಗುಜರಾತ್‌ನ ನವಾÕರಿಯಲ್ಲಿ ಅತಂತ್ರ ಪರಿಸ್ಥಿತಿ
ಗುಜರಾತ್‌ನ ರಂಗೂನ್‌ ನಗರ್‌,  ಭಾರೀ ಮಳೆ ಸುರಿದಿದ್ದು ಅನೇಕ ಸ್ಥಳಗಳು ಜಲಾವೃತವಾಗಿವೆ. ಇದರಿಂದಾಗಿ, ಸಾವಿರಾರು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸ್ಥಳಕ್ಕೆ ಧಾವಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ರಾಜ್‌ಕೋಟ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನ್ಯಾರಿ ಅಣೆಕಟ್ಟು ತುಂಬಿ ಹೊರಹರಿಯುತ್ತಿದೆ.

ಹಿ. ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತ
ಹಿಮಾಚಲ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನಾಲಿಯ ಪ್ರಮುಖ ಬಸ್‌ಸ್ಟಾಂಡ್‌ ಜಲಾವೃತವಾಗಿದೆ. ಹಲವಾರು ಬಸ್‌ಗಳು ಪ್ರವಾಹದ ನೀರಿನಿಂದಾಗಿ ಕೊಚ್ಚಿ ಹೋಗಿ ಜಖಂಗೊಂಡಿವೆ. ಯಾವುದೇ ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ.

ದೆಹಲಿಯಲ್ಲೂ ಜನಜೀವನ ತತ್ತರ
ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಎನ್‌ಸಿಆರ್‌ ಪ್ರಾಂತ್ಯದಲ್ಲಿ ಬುಧವಾರದಂದು ಭಾರೀ ಮಳೆಯಾಗಿದೆ. ಎನ್‌ಸಿಆರ್‌ ಪ್ರಾಂತ್ಯದ ಲೋನಿ ದೆಹಾತ್‌, ಹಿಂಡಾನ್‌ ಎಎಫ್ ಸ್ಟೇಷನ್‌, ಗಾಜಿಯಾಬಾದ್‌, ಇಂದಿರಾಪುರಂ, ಛಪ್ರೌಲಾ, ನೊಯ್ಡಾ, ದಾದ್ರಿ, ಗ್ರೇಟರ್‌ ನೋಯ್ಡಾದಲ್ಲಿ ಭಾರೀ ಮಳೆಯಾಗಿದೆ. ನವದೆಹಲಿಗೆ ಹತ್ತಿರವಾಗಿರುವ ಹರ್ಯಾಣದ ನರ್ವಾಣಾ, ಬರ್ವಾಲಾ, ಚಕ್ರಿ ದಾದ್ರಿ, ಮಟ್ಟನ್‌ಹಾಯ್ಲಿ, ಝಜ್ಜರ್‌, ಫಾರೂಖ್‌ ನಗರ್‌, ಕೊಸಾಲಿ, ಮಹೇಂದರ್‌ ಗಢ (ಹರ್ಯಾಣ), ನಾಜಿಯಾಬಾದ್‌, ಬಿಜಾ°ರ್‌, ಚಂದಾಪುರ, ಅನ್ರೋಹಾ (ಉತ್ತರ ಪ್ರದೇಶ) ಮುಂತಾದೆಡೆ ಭಾರೀ ಮಳೆಯಾಗಿದೆ.

ಅಮರನಾಥ ಯಾತ್ರೆ ಪುನಃ ಸ್ಥಗಿತ
ಇತ್ತೀಚೆಗಷ್ಟೇ ಪುನರಾರಂಭಗೊಂಡಿದ್ದ ಅಮರನಾಥ ಯಾತ್ರೆ ಪುನಃ ಸ್ಥಗಿತಗೊಂಡಿದೆ. ಬೇಸ್‌ಕ್ಯಾಂಪ್‌ಗ್ಳಿರುವ ಪ್ರಾಂತ್ಯಗಳಲ್ಲಿ ಅತೀವ ಮಳೆಯಾಗಿ, ಪ್ರವಾಹದಂಥ ಪರಿಸ್ಥಿತಿ ಉಂಟಾಗಿರುವುದು ಹಾಗೂ ಬೇಸ್‌ಕ್ಯಾಂಪ್‌ಗ್ಳಿಗೂ ನೀರು ನುಗ್ಗಿ ಅಲ್ಲಿದ್ದ ಯಾತ್ರಾರ್ಥಿಗಳಿಗೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಬದ್ರಿನಾಥ್‌ ಹೈವೇ ಬಂದ್‌: ಉತ್ತರಾಖಾಂಡದ ಚಮೋಲಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವಾರು ಕಡೆ ಭೂಕುಸಿತ ಉಂಟಾಗಿದೆ. ಬದ್ರಿನಾಥ್‌ ಹೆದ್ದಾರಿಯ ಅಲ್ಲಲ್ಲಿ ಭೂ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಆ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next