ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಎರಡು ವಾರದಿಂದ ಮಳೆಯಾಗುತ್ತಿದ್ದು ಬರದ ಛಾಯೆ ಮರೆಯಾಗಿದೆ. ಬತ್ತಿ ಹೋಗಿದ್ದ ನದಿತೊರೆಗಳು ಜೀವಕಳೆ ಪಡೆದು ಕೊಂಡಿವೆ.
ಭಾಗಮಂಡಲ, ಕಕ್ಕಬ್ಬೆ, ನಾಪೋಕ್ಲು, ಮೂರ್ನಾಡು, ವೀರಾಜಪೇಟೆ, ಕದನೂರು, ನಂಜರಾಯಪಟ್ಟಣ, ಗುಡ್ಡೆಹೊಸೂರು, ಕುಶಾಲನಗರ, ಕಣಿವೆ, ಕೂಡಿಗೆ ಸೇರಿದಂತೆ ಕಾವೇರಿ ನದಿ ಹರಿಯುವ ಪ್ರದೇಶಗಳಲ್ಲೂ ಉತ್ತಮ ಮಳೆಯಾಗಿದೆ. ಇದರಿಂದ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.
ಕುಶಾಲನಗರ ತಾಲೂಕಿನ ಗುಡ್ಡೆ ಹೊಸೂರು ಬಳಿಯ ತೂಗು ಸೇತುವೆಯ ಬಳಿ ಕಾವೇರಿ ನದಿ ನೀರಿನಲ್ಲಿ 5 ಅಡಿಗಳಷ್ಟು ಏರಿಕೆ ಕಂಡು ಬಂದಿದೆ.
ಉತ್ತಮ ಮಳೆಯಿಂದಾಗಿ ಕೊಡಗು ಮತ್ತೆ ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ರಾಜಾಸೀಟ್, ಮಾಂದಲಪಟ್ಟಿ, ಕೋಟೆಬೆಟ್ಟ, ಅಬ್ಬಿಫಾಲ್ಸ್‌ನ ಸೊಬಗು ಹೆಚ್ಚಾಗಿದೆ.