Advertisement
ಕಾಲು ಜಾರಿ ಚನಿಯ ಎಂಬವರು ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಅರಂತೋಡು ಗ್ರಾಮದ ಬಾಜಿನಡ್ಕದಲ್ಲಿ ಸಂಭವಿಸಿದೆ.
ಮುಂದಿನ ಮೂರು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ “ಎಲ್ಲೋ ಅಲರ್ಟ್’ ಘೋಷಿಸಿದೆ. ಮಳೆ ಬಿಡುವು ನೀಡಿದ ಪರಿಣಾಮ ಗರಿಷ್ಠ ತಾಪಮಾನ ಏರಿಕೆ ಕಂಡಿದ್ದು, ಮಂಗಳೂರಿನಲ್ಲಿ ಶುಕ್ರವಾರ 30.8 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.8 ಡಿ.ಸೆ., 23.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.2 ಡಿ.ಸೆ. ತಾಪಮಾನ ಏರಿಕೆ ಕಂಡಿತ್ತು. ಇನ್ನೂ ಮಳೆ ಕೊರತೆ
ಕರಾವಳಿ ಭಾಗದಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗು ತ್ತಿದ್ದರೂ ಜೂನ್ ತಿಂಗಳಿನಲ್ಲಿ ಸುರಿಯಬೇಕಾದ ವಾಡಿಕೆ ಮಳೆ ಇನ್ನೂ ಸುರಿದಿಲ್ಲ. ಕೆಎಸ್‌ಎನ್‌ಡಿಎಂಸಿ ಮಾಹಿತಿ ಪ್ರಕಾರ ಜೂ.1 ರಿಂದ 28ರ ವರೆಗೆ ದ.ಕ. ಜಿಲ್ಲೆಯಲ್ಲಿ 838 ಮಿ.ಮೀ. ಮಳೆಯಾಗಬೇಕಿದ್ದು, 751 ಮಿ.ಮೀ. ಸುರಿದು ಶೇ.10ರಷ್ಟು ಕೊರತೆ, ಉಡುಪಿ ಜಿಲ್ಲೆಯಲ್ಲಿ 1007 ಮಿ.ಮೀ. ವಾಡಿಕೆ ಮಳೆಯಲ್ಲಿ 839 ಮಿ.ಮೀ. ಮಳೆಯಾಗಿ ಶೇ. 17ರಷ್ಟು ಕೊರತೆ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 621 ಮಿ.ಮೀ. ವಾಡಿಕೆ ಮಳೆಯ ಪೈಕಿ 516 ಮಿ.ಮೀ. ಸುರಿದು ಶೇ.17ರಷ್ಟು ಕೊರತೆ ಇದೆ. ಒಟ್ಟಾರೆ ಕರಾವಳಿ ಭಾಗದಲ್ಲಿ 751 ಮಿ.ಮೀ. ಮಳೆಯಾಗಬೇಕು. ಆದರೆ, 639 ಮಿ.ಮೀ. ಮಳೆಯಾಗಿ ವಾಡಿಕೆಗಿಂತ ಶೇ.15ರಷ್ಟು
ಕೊರತೆ ಇದೆ.
Related Articles
ಉಡುಪಿ: ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಗುರುವಾರದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಆವರಿಸಿದ್ದ ಕೃತಕ ನೆರೆ ಇಳಿಕೆಯಾಗಿದೆ. ಶುಕ್ರವಾರ ಹಲವೆಡೆ ಸಾಧಾರಣ ಮಳೆಯಾಗಿದೆ. ಕುಂದಾಪುರ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಬಿಸಿಲು ಮೋಡ ಕವಿದ ವಾತಾವರಣದ ನಡುವೆ ಬಿಟ್ಟುಬಿಟ್ಟು ಮಳೆಯಾಗಿದೆ.
Advertisement
ಬೊಮ್ಮರಬೆಟ್ಟು, ಮಣಿಪುರ, ಕೊರಂಗ್ರಪಾಡಿ, ಹಿರೇಬೆಟ್ಟು, ಅಂಜಾರು, ಕಡೆಕಾರು, ಕುತ್ಪಾಡಿ, ಶಿವಳ್ಳಿ, ಬಡಬೆಟ್ಟು, ಗಂಗೊಳ್ಳಿ, ಉಳೂ¤ರು. ವಕ್ವಾಡಿ, ಶಿರ್ವ, ನಂದಿಕೂರು. ಮಾಳ, ಕಾರ್ಕಳ, ಕಾವಡಿಯಲ್ಲಿ ಮನೆಗಳಿಗೆ ಹಾನಿಯಾಗಿದೆ. ಕಾರ್ಕಳ 18.9, ಕುಂದಾಪುರ 60.1, ಉಡುಪಿ 16.2, ಬೈಂದೂರು 40.2 , ಬ್ರಹ್ಮಾವರ 66, ಕಾಪು 16, ಹೆಬ್ರಿ 41. 0 ಮಿ. ಮೀ. ಮಳೆಯಾಗಿದೆ.
ಸುಳ್ಯ: ಚಾಮಡ್ಕ, ಸೋಣಂಗೇರಿ ಪಾಲ್ಸ್ ವೀಕ್ಷಣೆಗೆ ನಿಷೇಧ
ಸುಳ್ಯ: ಮಳೆ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಸುಳ್ಯ ತಾಲೂಕಿನ ಚಾಮಡ್ಕ ಜಲಪಾತ ಮತ್ತು ಸೋಣಂಗೇರಿಯ ಜಲಪಾತ ವೀಕ್ಷಣೆಗೆ ಜಿಲ್ಲಾಧಿಕಾರಿಗಳು ನಿಷೇಧ ವಿಧಿಸಿದ್ದು, ಸ್ಥಳೀಯ ಗ್ರಾ.ಪಂ. ವತಿಯಿಂದ ತಡೆಬೇಲಿ ನಿರ್ಮಿಸಲಾಗಿದೆ. ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್, ತಾ.ಪಂ. ಕಾರ್ಯನಿರ್ವಹಣಾಧಿ ಕಾರಿ ರಾಜಣ್ಣ ಅವರು ಪಿಡಿಒ ದಯಾನಂದ ಪತ್ತುಕುಂಜ ಅವರೊಂದಿಗೆ ಚಾಮಡ್ಕ ಪಾಲ್ಸ್‌ಗೆ ತೆರಳಿ ತಡೆಬೇಲಿ ಕಟ್ಟಿಸುವ ಕಾರ್ಯ ನಡೆಸಿದರು. ಸಾರ್ವಜನಿಕರಿಗೆ ಸೂಚನೆಗಾಗಿ ಕೆಂಪು ಪಟ್ಟಿಯನ್ನು ಕೂಡಾ ಕಟ್ಟಲಾಗಿದ್ದು, ಪ್ರವೇಶ ನಿಷೇಧದ ಫಲಕವನ್ನು ಹಾಕಲಾಗಿದೆ. ಈ ನಿಷೇಧವನ್ನು ಉಲ್ಲಂಘಿಸುವುದು ಕಂಡು ಬಂದಲ್ಲಿ ದಂಡದ ಜತೆಗೆ ಕ್ರಿಮಿನಲ್ ಕೇಸು ದಾಖಲಿಸಲು ನಿರ್ದೇಶನವಿರುವುದಾಗಿ ತಹಶೀಲ್ದಾರ್ ಮತ್ತು ಇ.ಒ.ತಿಳಿಸಿದ್ದಾರೆ.