Advertisement

ಚೆನ್ನೈ ಏಕದಿನಕ್ಕೆ ಮಳೆ ಭೀತಿ

07:30 AM Sep 16, 2017 | |

ಚೆನ್ನೈ: ರವಿವಾರದ ಭಾರತ-ಆಸ್ಟ್ರೇಲಿಯ ನಡುವಿನ ಚೆನ್ನೈ ಏಕದಿನ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ ರವಿವಾರ ಮಧ್ಯಾಹ್ನ ಹಾಗೂ ಸಂಜೆ ವೇಳೆ ಚೆನ್ನೈಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಇದರಿಂದ ಪಂದ್ಯಕ್ಕೆ ಅಡಚಣೆಯಾಗುವ ಸಾಧ್ಯತೆ ಹೆಚ್ಚಿದೆ. ಸರಣಿಯ ಯಾವುದೇ ಪಂದ್ಯಕ್ಕೂ ಮೀಸಲು ದಿನವಿಲ್ಲ. ಆದರೆ ಈ ಪಂದ್ಯಕ್ಕೆ ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಟಿಕೆಟ್‌ಗಳೆಲ್ಲ ಮಾರಾಟವಾಗಿವೆ ಎಂದು ತಮಿಳುನಾಡು ಕ್ರಿಕೆಟ್‌ ಮಂಡಳಿ ತಿಳಿಸಿದೆ.

Advertisement

ಏಕದಿನ ಸರಣಿ ವೇಳಾಪಟ್ಟಿ
ಪಂದ್ಯ    ದಿನಾಂಕ    ಸ್ಥಳ    ಆರಂಭ
1.    ಸೆ. 17    ಚೆನ್ನೈ    ಮಧ್ಯಾಹ್ನ 1.30
2.    ಸೆ. 21    ಕೋಲ್ಕತಾ    ಮಧ್ಯಾಹ್ನ 1.30
3.    ಸೆ. 24    ಇಂದೋರ್‌    ಮಧ್ಯಾಹ್ನ 1.30
4.    ಸೆ. 28    ಬೆಂಗಳೂರು    ಮಧ್ಯಾಹ್ನ 1.30
5.    ಅ. 1    ನಾಗ್ಪುರ    ಮಧ್ಯಾಹ್ನ 1.30
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್, ಡಿಡಿ

Advertisement

Udayavani is now on Telegram. Click here to join our channel and stay updated with the latest news.

Next