Advertisement
ಸಾಮಾನ್ಯವಾಗಿ ತಾಪಮಾನ ಹೆಚ್ಚಾದಾಗ ವೈರಸ್ ಹರಡುವುದು ಕಡಿಮೆ. ಆದರೆ, ಮಳೆ ಮತ್ತು ತಂಪಾದ ವಾತಾವರಣ ಉಂಟಾದರೆ ತಾಪಮಾನ ಕಡಿಮೆಯಾಗಲಿದೆ. ಮೂಲಗಳ ಪ್ರಕಾರ ಇನ್ನು 2 ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ.ನಗರದಲ್ಲಿ ಶುಕ್ರವಾರ ಮಧ್ಯಾಹ್ನ 35.2 ಗರಿಷ್ಠ ತಾಪಮಾನ ದಾಖಲಾಗಿದ್ದು, ಸಂಜೆ 4 ಗಂಟೆಯ ನಂತರ ತಂಪಾದ ವಾತಾವರಣ ಕಂಡುಬಂದಿತು. ನಗರದ ಕೆಂಗೇರಿ, ಮೆಜೆಸ್ಟಿಕ್, ಮಲ್ಲೇಶ್ವರ, ಜಯನಗರ, ಹಂಪಿನಗರ, ಹಲಸೂರು, ಶಿವಾಜಿನಗರ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಕೋವಿಡ್ 19 ಹಿನ್ನೆಲೆ ಜನರ ಓಡಾಟ ಕಡಿಮೆಯಾಗಿತ್ತು.
ಮಂತ್ರಿಮಾಲ್ ಮುಂಭಾಗ, ನಾಯಂಡಹಳ್ಳಿ ಸಿಗ್ನಲ್ ಸೇರಿದಂತೆ ಕೆಳಸೇತುವೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಪಾಲಿಕೆ ಸಿಬ್ಬಂದಿ ತಗ್ಗು ಪ್ರದೇಶದಲ್ಲಿ ನಿಂತ ನೀರನ್ನು ತೆರವುಗೊಳಿಸಿದರು.
ಎಲ್ಲೆಲ್ಲಿ ಎಷ್ಟು ಮಳೆ?
ಬಿದರಹಳ್ಳಿ 44.5ಮಿ.ಮೀ., ಕೆಂಗೇರಿ 20.5 ಮಿ.ಮೀ, ಚಿಕ್ಕ ಬಾಣಾವರ 18 ಮಿ.ಮೀ, ಸಂಪಂಗಿ ರಾಮನಗರ 13 ಮಿ.ಮೀ, ರಾಜರಾಜೇಶ್ವರಿ ನಗರ 12 ಮಿ.ಮೀ, ವಿದ್ಯಾರಣ್ಯಪುರ 12 ಮಿ.ಮೀ, ಚಾಮರಾಜಪೇಟೆ 12 ಮಿ.ಮೀ, ಬಸವನಗುಡಿ 9 ಮಿ.ಮೀ, ಬಿಟಿಎಂ ಲೇಔಟ್ 9.5 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ.