Advertisement

ವಿಧಾನಸೌಧ ಸುತ್ತ ಭರ್ಜರಿ ಮಳೆ ;ಪ್ರಮಾಣ ವಚನ ಕಾರ್ಯಕ್ರಮ, ಪರದಾಟ

02:42 PM May 23, 2018 | |

ಬೆಂಗಳೂರು: ವಿಧಾನಸೌಧದ ಸುತ್ತಮುತ್ತ ಮಂಗಳವಾರ ಮಧ್ಯಾಹ್ನ 2 ಗಂಟೆಯ ವೇಳೆ ಭರ್ಜರಿ ಮಳೆ ಸುರಿದು  ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ  ಅಡ್ಡಿಯಾಗಿದೆ.

Advertisement

ವಿಧಾನಸೌಧದ ಮುಂಭಾಗದಲ್ಲಿ  ಸಾವಿರಾರು ಜೆಡಿಎಸ್‌, ಕಾಂಗ್ರೆಸ್‌ ಕಾರ್ಯಕರ್ತರು ಜಮಾಯಿಸಿದ್ದು  ಹಲವರು ಮಳೆ ಶುಭ ಸೂಚನೆ ಎಂದು ಸಂಭ್ರಮಿಸಿದ್ದಾರೆ. 

ಹಲವರು ಕುರ್ಚಿಗಳು, ಕಟೌಟ್‌ ಬ್ಯಾನರ್‌ಗಳನ್ನೇ  ಕೊಡೆಗಳನ್ನಾಗಿಸಿಕೊಂಡರು. ಹಲವರು ಮಳೆ ಸುರಿಯುತ್ತಿದ್ದಂತೆ ದಿಕ್ಕಾಪಾಲಗಿ ಓಡಿದರು. 

ಸಾವಿರಾರು ಜನರು ಮಳೆಯಲ್ಲಿ ನೆನೆದು ಪರದಾಡಬೇಕಾಯಿತು. ಹಲವರು ಮೆಟ್ರೋ ಸ್ಟೇಷನ್‌ ಬಳಿ ತೆರಳಿ ಆಶ್ರಯ ಪಡೆದರು. 

ದೇಶದ ವಿವಿಧೆಡೆಯಿಂದ ಗಣ್ಯರು ಆಗಮಿಸಿರುವ ಹಿನ್ನಲೆಯಲ್ಲಿ  ವ್ಯಾಪಕ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿದ್ದು, ಕರ್ತವ್ಯದಲ್ಲಿದ್ದ ಹಲವರು ಮಳೆಯಲ್ಲಿ ನೆನೆದು ಪರದಾಡಬೇಕಾಯಿತು. 

Advertisement

ಕಾರ್ಯಕ್ರಮದ ನೇರ ಪ್ರಸಾರ ನೀಡಲು ನೆರೆದಿದ್ದ  ನೂರಾರು ಮಾಧ್ಯಮಗಳ ಸಿಬಂದಿಗಳು , ಕ್ಯಾಮರಾಮೆನ್‌ಗಳು ಮಳೆಯಿಂದಾಗಿ ತೀವ್ರ ವಾಗಿ ತೊಂದರೆ ಅನುಭವಿಸಿದರು.

ಭರ್ಜರಿ ಮಳೆಯಿಂದ ವೇದಿಕೆ ತೊಯ್ದು ಹೋಗಿದೆ. ಮಳೆ ವಾತಾವರಣ ಮುಂದುವರಿದರೆ ಪ್ರಮಾಣವಚನ ಸ್ವೀಕಾರ ಸಮಾರಂಭದ ಸ್ಥಳ ಬದಲಾವಣೆ ಮಾಡುವ ಸಾಧ್ಯತೆಗಳಿವೆ. 

ಬೆಂಗಳೂರಿನಲ್ಲಿ ದಟ್ಟ ಮೋಡ ಕವಿದ ವಾತಾವರಣವಿದ್ದು, 4 ಗಂಟೆಯ ವೇಳೆಗೂ ಮಳೆಯಾಗುವ ಲಕ್ಷಣಗಳಿವೆ. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಪದಗ್ರಹಣ ನಡೆಯಲಿದೆ ಎನ್ನಲಾಗಿದೆ. 

ಬೆಂಗಳೂರಿನ ವಿವಿಧೆಡೆ ಗುಡುಗು ಸಹಿತ ಗಾಳಿ ಮಳೆ ಸುರಿದಿದೆ. 4 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ತಣ್ಣಿಗಿನ ವಾತಾವರಣ ನಿರ್ಮಾಣವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next