ಅಹಮದಾಬಾದ್: ಎರಡು ತಿಂಗಳ ವರ್ಣರಂಜಿತ ಐಪಿಎಲ್ ಕೂಟವು ತೆರೆ ಕಾಣುವ ಹಂತ ಬಂದಿದೆ. ರವಿವಾರ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಆದರೆ ಐಪಿಎಲ್ ಫೈನಲ್ ಗೆ ಮಳೆ ಬರುವ ಸಾಧ್ಯತೆಯಿದೆ. ಶುಕ್ರವಾರದ ಕ್ವಾಲಿಫೈಯರ್ 2 ಪಂದ್ಯಕ್ಕೆ ಆರಂಭದಲ್ಲಿ ಮಳೆಯಾಗಿದ್ದು, ಇದರ ಪರಿಣಾಮವಾಗಿ ಪ್ರಾರಂಭದಲ್ಲಿ 30 ನಿಮಿಷಗಳ ವಿಳಂಬವಾಯಿತು. ಇದೇ ರೀತಿಯ ವಾತಾವರಣ ಮುಂದುವರಿದರೆ ಅಂತಿಮ ಪಂದ್ಯದ ಮೇಲೆ ಪರಿಣಾಮ ಬೀರಬಹುದು.
ಒಂದು ವೇಳೆ ಫೈನಲ್ ಪಂದ್ಯಕ್ಕೆ ಮಳೆ ಕಾಟ ನೀಡಿದರೆ, ಓವರ್ ಗಳ ಸಂಖ್ಯೆಯನ್ನು ಕಡಿಮೆ ಮಾಡದೆಯೇ ರಾತ್ರಿ 10.10 ರವರೆಗೆ ಕಾದು ಪಂದ್ಯ ಆರಂಭಿಸಬಹುದು. ಒಂದು ವೇಳೆ ನಂತರವೂ ಮಳೆ ಬಂದರೆ 12.26 ಆಗಿರುತ್ತದೆ. ಈ ವೇಳೆ ತಲಾ ಐದು ಓವರ್ ಗಳ ಪಂದ್ಯ ನಡೆಯಲಿದೆ. ಇಲ್ಲಿ ಯಾವುದೇ ಟೈಮೌಟ್ ಇರುವುದಿಲ್ಲ.
ಇದನ್ನೂ ಓದಿ:Kerala: ಸಾವಿರ ವರ್ಷದ ಪುರಾತನ ದೇವಾಲಯವನ್ನು ಭೂಮಿಯಿಂದ 6 ಅಡಿ ಎತ್ತರಕ್ಕೆ ಏರಿಸಿದ್ದೇಗೆ?
Related Articles
ಅಂತಿಮ ಪಂದ್ಯವು ಪ್ರಾರಂಭಗೊಂಡರೆ (ಕನಿಷ್ಠ ಒಂದು ಬಾಲ್ ನಡೆದರೂ) ಆದರೆ ನಿಗದಿತ ದಿನದಂದು ಪೂರ್ಣಗೊಳ್ಳದಿದ್ದರೆ, ಅದು ಮೀಸಲು ದಿನದಂದು ಪೂರ್ಣಗೊಳ್ಳುತ್ತದೆ. ಹಿಂದಿನ ದಿನ ನಿಲ್ಲಿಸಿದ ಹಂತದಿಂದ ಪಂದ್ಯ ಪುನರಾರಂಭವಾಗುತ್ತದೆ.
ಒಂದು ವೇಳೆ ಮೀಸಲು ದಿನದಂದು ಹೆಚ್ಚುವರಿ ಸಮಯದ ಅಂತ್ಯದ ವೇಳೆಗೆ 5-ಓವರ್‌ಗಳ ಪಂದ್ಯವನ್ನೂ ಪೂರ್ಣಗೊಳಿಸಲು ಸಾಧ್ಯವಾಗದ ಸಂದರ್ಭದಲ್ಲಿ, ಫಲಿತಾಂಶ ಪಡೆಯಲು ಸೂಪರ್ ಓವರ್ ಆಡುತ್ತವೆ. ಆದರೆ ತಂಡಗಳು ಅನುಮತಿಸಿದರೆ, ಅಂದರೆ ಪಿಚ್ ಮತ್ತು ಗ್ರೌಂಡ್ ಆಟಕ್ಕೆ ಸಿದ್ಧವಾಗಿರಬೇಕು ಆದ್ದರಿಂದ ಇಂತಹ ಸಂದರ್ಭದಲ್ಲಿ ಸೂಪರ್ ಓವರ್ 1.20 ಕ್ಕೆ ಪ್ರಾರಂಭವಾಗುತ್ತದೆ.
ಒಂದು ವೇಳೆ ಮೀಸಲು ದಿನದಂದೂ ಸೂಪರ್ ಓವರ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ, ನಿಯಮಿತ ಋತುವಿನ 70 ಪಂದ್ಯಗಳ ನಂತರ ಲೀಗ್ ಟೇಬಲ್‌ನಲ್ಲಿ ಅಗ್ರ ಸ್ಥಾನ ಗಳಿಸಿದ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ.