Advertisement
ಮಹಿಳೆಯರು, ಸ್ಥಳೀಯ ಹಿರಿಯ ಕೃಷಿಕರು ಸೇರಿದಂತೆ ವಿದ್ಯಾರ್ಥಿಗಳು ಒಟ್ಟು ಸೇರಿ ನೇಜಿ ನೆಟ್ಟು ಸಂಭ್ರಮಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಉತ್ಸವದಲ್ಲಿ ಭಾಗವಹಿಸಿದ್ದಲ್ಲದೆ ನೇಜಿ ನೆಡುವ ಮೂಲಕ ಮಹಿಳೆ ಮತ್ತು ಪುರುಷರನ್ನು ಪ್ರೋತ್ಸಾಹಿಸಿದರು. ಇದೇ ಸಂದರ್ಭದಲ್ಲಿ ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸ ಲಾಯಿತು. ಪುರುಷ ಮತ್ತು ಮಹಿಳೆ ಯರಿಗೆ ಹಗ್ಗಜಗ್ಗಾಟ, ಗೋಣಿಚೀಲ ಸ್ಪರ್ಧೆ, ಲಿಂಬೆ ಚಮಚ ಓಟ, ನೂರು ಮೀಟರ್ ಓಟ ಸ್ಪರ್ಧೆ, ಮಕ್ಕಳಿ ಗಾಗಿ ಪುಟ್ಬಾಲ್ ಪಂದ್ಯಾಟಗಳು ನಡೆ ದವು. ಉದುಮ ದೀನ್ ದಯಾಳ್ ಉಪಾಧ್ಯಾಯ ಕಾಲೇಜಿನ ವಿದ್ಯಾರ್ಥಿ ಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಅನಂತರ ನೇಜಿ ನೆಡುವ ಕಾರ್ಯದಲ್ಲಿ ಕೈಜೋಡಿಸಿದರು.
ಸಮಾರಂಭವನ್ನು ಕಾಂಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ ಉದ್ಘಾಟಿಸಿದರು. ಉದುಮ ಗ್ರಾ.ಪಂ. ಅಧ್ಯಕ್ಷ ಕೆ.ಎ. ಮುಹಮ್ಮದಾಲಿ ಅಧ್ಯಕ್ಷತೆ ವಹಿಸಿದ್ದರು. ಸಂಘಟಕ ಸಮಿತಿ ಅಧ್ಯಕ್ಷ ಬಿ.ಬಿ. ಅಶ್ರಫ್ ಸ್ವಾಗತಿಸಿದರು. ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಟಿ. ಸುರೇಂದ್ರನ್ ಉತ್ಸವದ ಬಗ್ಗೆ ಮಾಹಿತಿ ನೀಡಿದರು.
Related Articles
ಕುಮಾರ್, ಅಬೂಬಕ್ಕರ್, ಹಮೀದ್ ಮಾಂಗಾಡ್, ಚಂದ್ರನ್, ಕಮಲಾಕ್ಷಿ, ವತ್ಸಲಾ ಶ್ರೀಧರನ್, ಮಾಂಗಾಡ್ ಭತ್ತ ಕೃಷಿ ಸಮಿತಿಯ ಅಧ್ಯಕ್ಷ ಪಿ.ಎ. ಹಸೈನಾರ್, ಗ್ರಾ.ಪಂ. ಕುಟುಂಬಶ್ರೀ ಸಿಡಿಎಸ್‌ನ ಎಂ. ಪುಷ್ಪಲತಾ ಮೊದಲಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಕೃಷಿಕರನ್ನು ಮಾಜಿ ಗ್ರಾ.ಪಂ. ಅಧ್ಯಕ್ಷೆ ಎಂ.ಲಕ್ಷ್ಮೀ ಗೌರವಿಸಿದರು.
Advertisement
ಕರಿಮೋಡ ಆವರಿಸಿದ ಆಕಾಶದ ಕೆಳಗೆ ಮಳೆ, ಗಾಳಿಯನ್ನು ಲೆಕ್ಕಿಸದೆ ಕುಟುಂಬಶ್ರೀ ಸದಸ್ಯೆಯರು ಸೇರಿದಂತೆ ಹಿರಿ ತಲೆಮಾರಿನ ಕೃಷಿ ಕಾರ್ಮಿಕರು ಒಟ್ಟು ಸೇರಿ ಕೃಷಿ ಸಂಸ್ಕೃತಿಯನ್ನು ನೆನಪಿಸುವ ಕಾರ್ಯವನ್ನು ಕೈಗೊಂಡರು. ಈ ಕೃಷಿ ಉತ್ಸವವನ್ನು ನೋಡಲು ಮತ್ತು ಉತ್ಸವದಲ್ಲಿ ಭಾಗವಹಿಸಲು ನೂರಕ್ಕೂ ಹೆಚ್ಚಿನ ಸಂಖ್ಯೆಯ ಆಸಕ್ತರು ಭಾಗವಹಿಸಿದ್ದರು.