Advertisement

ಸರಕಾರದ ಬೆಂಗಳೂರು ಕುರಿತ ಘೋಷಣೆಗಳು ಬೋಗಸ್ ಎಂದು ಮಳೆ ಬಯಲು ಮಾಡಿದೆ: ಶರವಣ

03:33 PM Sep 01, 2022 | Team Udayavani |

ಬೆಂಗಳೂರು: ಸ್ವಚ್ಛ ಹಾಗೂ ಸುಂದರ ಬೆಂಗಳೂರು, ಸಿಲಿಕಾನ್ ಸಿಟಿ ಬೆಂಗಳೂರು ಕುರಿತು ಸರಕಾರದ ಘೋಷಣೆಗಳು ಸಂಪೂರ್ಣ ಬೋಗಸ್ ಎನ್ನುವುದನ್ನು ಈ ಮಹಾಮಳೆ ಬಯಲು ಮಾಡಿದೆ ಎಂದು ಜೆಡಿಎಸ್ ಹಿರಿಯ ನಾಯಕ, ಶಾಸಕರು ವಿಧಾನ ಪರಿಷತ್ ಟಿ. ಎ. ಶರವಣ ಆಕ್ರೋಶ ಹೊರಹಾಕಿದ್ದಾರೆ.

Advertisement

ಚುನಾಯಿತ ಪ್ರತಿನಿಧಿ ಇಲ್ಲದ ಮಹಾನಗರ ಪಾಲಿಕೆ, ಮಳೆಯಲ್ಲಿ ಬಡವರು, ಮಧ್ಯಮ ವರ್ಗದ ಬದುಕು ಕೊಚ್ಚಿ ಹೋಗುತ್ತಿದ್ದರೂ ಕುಂಭಕರ್ಣ ನಿದ್ದೆಗೆ ಶರಣಾದ ಆಧಿಕಾರಿಗಳು, ಇದು ಬೆಂಗಳೂರಿನ ದುರವಸ್ಥೆಯಲ್ಲ, ಮಹಾ ದುರಂತ ಎಂದಿದ್ದಾರೆ.

ಮಳೆಯಿಂದ ಎಷ್ಟು ಹಾನಿಯಾಗಿದೆ? ಎಷ್ಟು ಜನರ ಬದುಕು ತತ್ತರವಾಗಿದೆ? ಸರಕಾರ ಕೊಟ್ಟ ನೆರವೇನು? ಇದಕ್ಕೆ ಸರಕಾರದ ಬಳಿ ಉತ್ತರ ಇದೆಯೇ. ಬೆಂಗಳೂರು ಉಸ್ತುವಾರಿ ಮುಖ್ಯಮಂತ್ರಿ ಬಳಿಯೇ ಇದೆ. ಖುದ್ದು ಮುಖ್ಯಮಂತ್ರಿ ಬೊಮ್ಮಾಯಿ ಕೈಗೊಂಡ ಕ್ರಮಗಳೇನು ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಈ ಮಳೆ ದುರಂತದ ಹಿಂದೆ ದೊಡ್ಡ ಕರ್ಮ ಕಾಂಡವೆ ಇದೆ. ಬಿಬಿಎಂಪಿ ಕಳಪೆ ಮತ್ತು ಬೋಗಸ್ ಕಾಮಗಾರಿಯಲ್ಲಿ ಜನರ ತೆರಿಗೆ ಹಣ ಭ್ರಷ್ಟರ ಪಾಲಾದರೆ, ಭೂಗಳ್ಳರು, ಅಕ್ರಮ ಲೇ ಔಟ್ ಕಳ್ಳರು, ಕೆರೆ ಕಬಳಿಕೆ ಕೇಡಿಗಳ ಪಡೆ ಬೆಂಗಳೂರಿನ ಈ ದುರವಸ್ಥೆಗೆ ಕಾರಣ ಎಂದು ಶರವಣ ಕಿಡಿ ಕಾರಿದ್ದಾರೆ.

ಬೆಂಗಳೂರು ಆಡಳಿತದ ಹೊಣೆ ಹೊತ್ತಿರುವ ಸಿಎಂ ಈ ಬಗ್ಗೆ ತನಿಖೆಗೆ ಆದೇಶ ಕೊಟ್ಟರೆ ಅಕ್ರಮ ಲೇ ಔಟ್ ಬಡಾವಣೆಯಲ್ಲಿ ನೀರು ನುಗ್ಗುವ ಚಿದಂಬರ ರಹಸ್ಯ ಬಯಲಾಗುತ್ತದೆ ಎಂದಿದ್ದಾರೆ.

Advertisement

ಮಳೆ ಬಂದಾಗ ಮುಖ್ಯಮಂತ್ರಿ ಸಿಟಿ ರೌoಡ್ಸ್ ಮಾಡುವುದು ಒಂದು ಸಾಂಪ್ರದಾಯಿಕ ನಾಟಕ ಅಥವಾ ಪ್ರಚಾರಕ್ಕೆ ನಡೆಸುವ ಪ್ರಹಸನ ಅಲ್ಲದೇ ಬೇರೇನೂ ಅಲ್ಲ. ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ನಡೆದುಹೋಗುವ ಈ ಭೇಟಿ ಅರ್ಥವನ್ನೇ ಕಳೆದುಕೊಂಡಿದೆ. ಪದೇ ಪದೇ ಅದೆ ಸ್ಥಿತಿ ಪುನರಾ ವರ್ತನೆಯಾಗಿದೆ. ಎಲ್ಲರು ಸೇರಿ ಬೆಂಗಳೂರು ಉಳಿಸದಿದ್ದರೆ ಅಪಾಯ ಖಂಡಿತ ಎಂದಿದ್ದಾರೆ.

ಬೆಂಗಳೂರು ವಿಚಾರದಲ್ಲಿ ಸಚಿವರ ನಡುವೆ ಕಿತ್ತಾಟ ಅಭಿವೃದ್ಧಿಗೆ ಕಂಟಕ. “ಎತ್ತು ಏರಿಗೆ ಎಳೆದರೆ, ಎಮ್ಮೆ ನೀರಿಗೆ ಎಳೆದಂತೆ ” ಸಪ್ತ ಸ್ವರ ಸಚಿವರು ಹಾಗೂ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರು ದುರಂತಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಇಷ್ಟೇಲ್ಲ ದೊಡ್ಡ ಸಂಖ್ಯೆಯಲ್ಲಿ ಮಂತ್ರಿಗಳ ದಂಡೆ ಇದ್ದರೂ ಜನರ ನರಳುತ್ತಿರುವುದು ವಿಷಾದಕರ ಎಂದು ನೋವಿನಿಂದ ನುಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next