Advertisement

ಮಳೆ ಹಾನಿ ಪರಿಶೀಲನೆ,ಪರಿಹಾರ ವಿತರಣೆ: ವಿಶೇಷ ಸಭೆ

06:45 AM Jul 31, 2018 | Team Udayavani |

ಕಾಪು: ಪುರಸಭಾ ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದ ಸಂಭವಿಸಿರುವ ಹಾನಿಗಳು ಮತ್ತು ಅದಕ್ಕೆ ಸಂಬಂಧಪಟ್ಟ ಪರಿಹಾರ ವಿತರಣೆ ಕುರಿತಾಗಿ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, ದಿನಾಂಕ ಗೊತ್ತುಪಡಿಸಿ ವಿಶೇಷ ಸಭೆ ನಡೆಸಲಾಗುವುದು ಎಂದು ಕಾಪು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಸ್ಪಷ್ಟನೆ ನೀಡಿದರು.

Advertisement

ಸೋಮವಾರ ಪುರಸಭೆಯ ಸಭಾಂಗಣದಲ್ಲಿ ನಡೆದ ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕ ಅರುಣ್‌ ಶೆಟ್ಟಿ ಪಾದೂರು ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಮಳೆ ಹಾನಿ ಸಂಬಂಧಪಟ್ಟು ಕಂದಾಯ, ಕೃಷಿ, ಮೆಸ್ಕಾಂ ಮತ್ತಿತರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಸಮಗ್ರ ವರದಿ ಪಡೆದು ಅರ್ಹರಿಗೆ ಪರಿಹಾರ ಧನ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮಳೆ ಹಾನಿ ಕುರಿತಂತೆ ವಿಪಕ್ಷ ನಾಯಕ ಅರುಣ್‌ ಶೆಟ್ಟಿ ಪಾದೂರು ಅವರು ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ನೆರೆ ಹಾವಳಿಯಿಂದ ನೂರಾರು ಎಕರೆ ಭತ್ತದ ಕೃಷಿ ಹಾನಿಯಾಗಿದೆ. ಸರಕಾರದ ಬೆಳೆ ವಿಮೆ ಮತ್ತಿತರ ಯೋಜನೆಗಳ ಬಗ್ಗೆ ಜನರಿಗೆ ಇನ್ನೂ ಮಾಹಿತಿ ಇಲ್ಲ. ಕೃಷಿ ಭೂಮಿ, ಹಡೀಲು ಭೂಮಿ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಈ ಬಗ್ಗೆ ಅಧಿಕಾರಿಗಳಿಂದ ಸಮಗ್ರ ಲಿಖೀತ ಮಾಹಿತಿ ಪಡೆಯಬೇಕು ಎಂದು ಆಗ್ರಹಿಸಿದರು.

ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಜಾರಿಯಾಗಲಿ
ಪುರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಒಂದು ವರ್ಷದ ಹಿಂದೆಯೇ ಪುರಸಭೆಯ ಕೌನ್ಸಿಲ್‌ನ ಗಮನಕ್ಕೆ ತರಲಾಗಿದೆ. ಆದರೂ ಕೂಡಾ ಇವುಗಳ ನಿಯಂತ್ರಣಕ್ಕೆ ಯಾವುದೇ ರೀತಿಯ ಕ್ರಮ ಜಾರಿಯಾಗಿಲ್ಲ. ಅದರಿಂದಾಗಿ ಬೀದಿ ನಾಯಿಗಳ ಸಂಖ್ಯೆ ಕಳೆದ ಬಾರಿಗಿಂತ ಶೇ.30ರಷುÒ ಹೆಚ್ಚಳವಾಗಿದ್ದು, ಇದರಿಂದಾಗಿ ಜನ ಭಯಭೀತರಾಗುವಂತಾಗಿದೆ ಎಂದು ಆಡಳಿತ ಪಕ್ಷದ ಸದಸ್ಯ ಲಕೀÒ$¾ಶ ತಂತ್ರಿ ದೂರಿದರು.

ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಕಳೆದ ಬಾರಿಯ ಬಜೆಟ್‌ನಲ್ಲಿ 5 ಲಕ್ಷ ರೂಪಾಯಿ ಹಣ ತೆಗೆದಿರಿಸಲಾಗಿದೆ. ಈ ಬಗ್ಗೆ ಈಗಾಗಲೇ ಕೊಟೇಷನ್‌ ಕರೆಯಲಾಗಿದೆ. ಅದಕ್ಕೆ ಸಂಬಂಧಪಟ್ಟು ವೈದ್ಯರನ್ನು ಕೂಡಾ ಸಂಪರ್ಕಿಸಲಾಗಿದೆ. ಒಂದು ನಾಯಿಗೆ ಇಂತಿಷ್ಟು ಹಣ ನಿಗದಿ ಪಡಿಸಿದ ಬಳಿಕ ಸಂತಾನ ಹರಣ ಚಿಕಿತ್ಸೆ ನಡೆಸಲು ಸಾಧ್ಯವಿದೆ ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದರು.

Advertisement

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿ, ಕಡಲ್ಕೊರೆತ ತಡೆಗೋಡೆ ನಿರ್ಮಾಣ ಬಂದರು ಇಲಾಖೆ ಜವಾಬ್ದಾರಿಯಾಗಿದೆ. ಪುರಸಭಾ ವ್ಯಾಪ್ತಿಯಲ್ಲಿನ ಕಡಲ್ಕೊರೆತದ ಸಮಸ್ಯೆಗಳ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ. ಕೈಪುಂಜಾಲಿನ ಒಂದು ಕಿ. ಮೀ. ವ್ಯಾಪ್ತಿಯಲ್ಲಿ ಕಲ್ಲು ಹಾಕುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸೂಕ್ತ ಸಂದರ್ಭದಲ್ಲಿ ಕಾಮಗಾರಿ ನಡೆಸುವ ಭರವಸೆಯೂ ದೊರಕಿದೆ ಎಂದರು.

ಕಾಪು ಪುರಸಭೆಯ 6 ವಾರ್ಡ್‌ಗಳಲ್ಲಿ ಸಿಆರ್‌ಝಡ್‌ ಕಾಯ್ದೆಯಿಂದಾಗಿ ತೊಂದರೆ ಯುಂಟಾ ಗುತ್ತಿದ್ದು, ಇದರಿಂದ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ತೊಡಕುಂಟಾಗುತ್ತಿದೆ. ಕಳೆದ ವರ್ಷ ನನ್ನ ವಾರ್ಡ್‌ನಲ್ಲಿ ಯಾವುದೇ ಕಾಮಗಾರಿಯೂ ನಡೆದಿಲ್ಲ. ಈ ಬಗ್ಗೆ ಪುರಸಭಾ ಕೌನ್ಸಿಲ್‌ ವಿಶೇಷ ನಿರ್ಣಯ ತೆಗೆದುಕೊಂಡು ಸರಕಾರಕ್ಕೆ ವರದಿ ಸಲ್ಲಿಸುವಂತೆ ಸದಸ್ಯ ಕಿರಣ್‌ ಆಳ್ವ ಒತ್ತಾಯಿಸಿದರು.

ಕಾಪು ಪೇಟೆಯ ಮರಗಳ ಬಗ್ಗೆ
ಕಾಪು ಪೇಟೆಯಲ್ಲಿ ಅಪಾಯಕಾರಿಯಾಗಿ ಬೆಳೆದಿರುವ ಮರಗಳ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಉಲ್ಲೇಖೀಸಿ ಸದಸ್ಯರು ಸಭೆಯ ಮುಂದೆ ಚರ್ಚೆ ನಡೆಸಿದ್ದು, ಇದಕ್ಕೆ ಪುರಸಭೆ ಯಾವ ರೀತಿಯ ಕ್ರಮ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ, ಕಾಪು ಪೇಟೆಯಲ್ಲಿ ಅಪಾಯಕಾರಿಯಾಗಿ ಬೆಳೆದಿರುವ ಮರಗಳ ಗೆಲ್ಲುಗಳನ್ನು ಕಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ವರದಿ ಕೇಳಲಾಗಿದೆ. ಅರಣ್ಯ ಇಲಾಖೆಯಿಂದ ಉತ್ತರ ಬಂದ ಬಳಿ ಈ ಬಗ್ಗೆ ಆಲೋಚನೆ ಮಾಡಲಾಗುವುದು ಎಂದರು.

ಕಾಪು ಪುರಸಭೆ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಕೆ.ಎಚ್‌. ಉಸ್ಮಾನ್‌, ಸ್ಥಾಯೀ ಸಮಿತಿ ಅಧ್ಯಕ್ಷೆ ಶಾಂತಲತಾ ಶೆಟ್ಟಿ ಉಪಸ್ಥಿತರಿದ್ದರು.

ಕಡಲ್ಕೊರೆತ ತಡೆಗೆ ಬೇಕಿದೆ ಶಾಶ್ವತ ತಡೆಗೋಡೆ 
ವಿಪಕ್ಷ ಸದಸ್ಯ ಕಿರಣ್‌ ಆಳ್ವ ಅವರು ಕಡಲ್ಕೊರೆತದ ಹಾವಳಿಯ ಬಗ್ಗೆ ವಿಷಯ ಪ್ರಸ್ತಾವಿಸಿ, ಎಡಿಬಿ ನಡೆಸುತ್ತಿರುವ ಬ್ರೇಕ್‌ ವಾಟರ್‌ ಕಾಮಗಾರಿಯಿಂದಾಗಿ ಕೈಪುಂಜಾಲಿನಲ್ಲಿ ಕಡಲ್ಕೊರೆತ ಉಂಟಾಗಿದೆ. ಈ ಭಾಗದಲ್ಲಿ ಸಂಪೂರ್ಣ ಶಾಶ್ವತ ತಡೆಗೋಡೆ ನಿರ್ಮಾಣ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು. ನಿರ್ಣಯದ ಪ್ರತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಚರ್ಚಿಸಲ್ಪಟ್ಟ ಪ್ರಮುಖ ವಿಷಯಗಳು
– ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ನೇತೃತ್ವದಲ್ಲಿ ಸ್ವಾತಂತ್ರೋತ್ಸವ ತಾಲೂಕು ಮಟ್ಟದಲ್ಲಿ ಆಚರಣೆ
– ನಗರೋತ್ಥಾನ ಕಾಮಗಾರಿಗೆ ಶೀಘ್ರ ಪ್ರಾರಂಭಿಸಲು ಕ್ರಮ
– ಕಾಪು ಪೇಟೆಯ ರಸ್ತೆ ಸರಿಪಡಿಸಲು ಒತ್ತಾಯ
– ಕೆಲವೊಂದು ವಾರ್ಡ್‌ಗಳಿಗೆ ಕನಿಷ್ಟ ಅನುದಾನವೂ ಲಭ್ಯವಾಗದೇ ಇರುವುದು
– ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಪುರಸಭೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ
– ಅಂಗನವಾಡಿ ಸ್ವಂತ ಕಟ್ಟಡ ನಿರ್ಮಾಣಕ್ಕೆ 15 ರೂ. ಲಕ್ಷ ಅನುದಾನ ಬಿಡುಗಡೆ

Advertisement

Udayavani is now on Telegram. Click here to join our channel and stay updated with the latest news.

Next