Advertisement

ಮಳೆ, ಚಳಿ, ಬಿಸಿಲು ಕೋವಿಡ್ ಮೇಲೆ ಪರಿಣಾಮ ಬೀರದು

10:20 AM May 09, 2020 | sudhir |

ಕೋವಿಡ್ ಮಳೆಗಾಲ, ಚಳಿಗಾಲದಲ್ಲಿ ತೀವ್ರವಾಗುತ್ತದೆ, ಬೇಸಗೆಯಲ್ಲಿ ದುರ್ಬಲವಾಗುತ್ತದೆ ಎಂಬ ವಾದ ಚಾಲ್ತಿಯಲ್ಲಿತ್ತು. ಆದರೆ, ವಿಜ್ಞಾನಿಗಳ ಸಂಶೋಧನೆ ಈ ವಾದಕ್ಕೆ ಉಲ್ಟಾ ಫ‌ಲಿತಾಂಶ ನೀಡಿದೆ. ಮಳೆ, ಬಿಸಿಲು, ಚಳಿ- ಋತುವಿನ ಈ ಯಾವ ಬದಲಾವಣೆಗಳೂ ಕೊರೊನಾ ವೈರಾಣು ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ.

Advertisement

ಹೌದು, ಕೆನಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಜರ್ನಲ್‌ ಈ ಸಂಶೋಧನಾ ವರದಿ ಬಿತ್ತರಿಸಿದೆ. ಜಗತ್ತಿನ 144 ಭೌಗೋಳಿಕ ಪ್ರದೇಶಗಳ ಅಕ್ಷಾಂಶ, ತಾಪಮಾನ, ತೇವಾಂಶ, ಶಾಲೆ ಮುಚ್ಚುವಿಕೆ, ಸಾಮಾಜಿಕ ಅಂತರ- ಇತ್ಯಾದಿಗಳನ್ನು ಆಧರಿಸಿ ಸಂಶೋಧನೆ ನಡೆಸಲಾಗಿತ್ತು. ಮಾರ್ಚ್‌ 20 ಮತ್ತು ಮಾರ್ಚ್‌ 27- ಇವೆರಡು ದಿನಗಳಲ್ಲಿ ಪತ್ತೆಯಾದ ಪ್ರಕರಣಗಳನ್ನು ತಜ್ಞರು ಪರಿಗಣಿಸಿದ್ದರು. ಅದರಂತೆ, ಚಳಿ, ಮಳೆ, ಬಿಸಿಲುಗಳು ಕೊರೊನಾ ಹರಡುವಿಕೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿದುಬಂದಿದೆ.

ಚಳಿ, ಮಳೆಗೆ ಕೋವಿಡ್ ಹೆಚ್ಚುತ್ತೆ ಅಂದುಕೊಂಡಿದ್ದೆವು. ಆದರೆ, ನಮಗೆ ಸಿಕ್ಕಿರುವ ಫ‌ಲಿತಾಂಶ ಅಚ್ಚರಿ ತಂದಿದೆ. ಮರು ಅಧ್ಯಯನ ನಡೆಸಿದಾಗಲೂ, ಇದೇ ಫ‌ಲಿತಾಂಶವೇ ಬಂದಿದೆ. ಕೋವಿಡ್ ನಿಯಂತ್ರಿಸಲು ಸಾಮಾಜಿಕ ಅಂತರ, ಶಾಲೆಗಳನ್ನು ಮುಚ್ಚುವಿಕೆ, ಕಡಿಮೆ ಜನರ ಸಂಚಾರ ಇವು ಮಾತ್ರವೇ ಪರಿಣಾಮಕಾರಿ ಎಂಬುದು ತಿಳಿದುಬಂತು’ ಎಂದು ಟೊರಾಂಟೊ ವಿವಿಯ ತಜ್ಞ ಪೀಟರ್‌ ಜ್ಯುನಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next