Advertisement
ಬಿಸಿಲು ಮೋಡ ಕವಿದ ವಾತಾವರಣದೊಂದಿಗೆ ಆಗಾಗ ಮಳೆಯಾಗಿದ್ದು, ಮಧ್ಯಾಹ್ನ ಬಳಿಕ ಬಿಸಿಲಿನ ವಾತಾವರಣ ಕಂಡುಬಂತು. ಕಿಂಡಿ ಆಣೆಕಟ್ಟುಗಳಲ್ಲಿ ನೀರು ತುಂಬಿದ್ದು, ಹಲಗೆ ತೆರವು ಕಾರ್ಯ ನಡೆಯುತ್ತಿದೆ. ಮುಂಗಾರು ಸಮೀಪಿಸುತ್ತಿರುವಂತೆ ಮಳೆ ಆಗಮನವಾಗಿದ್ದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಕಳೆದ ಕೆಲವು ದಿನಗಳಿಗೆ ಹೋಲಿಕೆ ಮಾಡಿದರೆ ರಾಜ್ಯ ಕರಾವಳಿ ಭಾಗದಲ್ಲಿ ಗರಿಷ್ಠ ಉಷ್ಣಾಂಶ ಮತ್ತೆ ಏರಿಕೆ ಕಾಣುತ್ತಿದ್ದು, ಸೆಕೆ ಹೆಚ್ಚುತ್ತಿದೆ. ಮಂಗಳೂರಿನಲ್ಲಿ ಶನಿವಾರ 33 ಡಿ.ಸೆ. ಸರಾಸರಿ ಗರಿಷ್ಠ ಉಷ್ಣಾಂಶ ಮತ್ತು 24.5 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.