ಅರಂತೋಡು: ಗ್ರಾಮದ ಎಲ್ಪಕಜೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾದ ಘಟನೆ ಅರಂತೋಡಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಸುಮಾರು ಮೂರು ಗಂಟೆ ಹೊತ್ತಿಗೆ ಮರ ಬಿದ್ದಿದೆ. ಸಮೀಪವಿರುವ ಜನಾರ್ಧನ ಎಂಬವರ ಮನೆಯವರು ಮರ ಬೀಳುವ ಶಬ್ದದಿಂದ ಎಚ್ಚರಗೊಂಡರು. ವಿನಯ್ ಅರಂತೋಡಿನ ತಾಜುದ್ದೀನ್ ಅರಂತೋಡು ಅವರಿಗೆ ಫೋನ್ ಮಾಡಿ ತಿಳಿಸಿದರು.
ಅವರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕೃತಿ ವಿಕೋಪ ಸಹಾಯವಾಣಿಗೆ ಕರೆ ಮಾಡಿದರು. ತದನಂತರ ಅರಂತೋಡಿನ ಸೋಮಶೇಖರ ಪೈಕಿ ಅವರು ಕ್ರೇನ್ ತಂದು ಮರವನ್ನು ಬದಿಗೆ ಸರಿಸಲಾಯಿತು.
ಅದರ ಮುಂಚಿತವಾಗಿ ವಾಹನ ಚಾಲಕರು ಹಗ್ಗವನ್ನು ಮರಕ್ಕೆ ಕಟ್ಟಿ ಪಿಕಪ್ ವಾಹನದ ಮೂಲಕ ಮರವನ್ನು ಬದಿಗೆ ಸರಿಸಲು ಪ್ರಯತ್ನಿಸಿದರು. ರಸ್ತೆಯುದ್ದಕ್ಕೂ ಎರಡು ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿತು.
ಮಳೆ ವಿಪರೀತವಾಗಿ ಸುರಿಯುತ್ತಿದ್ದರೂ ಮರವನ್ನು ಬದಿಗೆ ಸರಿಸಲು ಪ್ರಯತ್ನಿಸಲಾಯಿತು. ಕ್ರೇನ್ ಬಂದ ಮೇಲೆ ಮರವನ್ನು ತೆರೆವುಗೊಳಿಸಿ ಸುಗಮ ಸಂಚಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಲಾರಿಯೊಂದು ಅವಸರದಿಂದ ಬಂದು ರಸ್ತೆಯ ಬದಿಗೆ ಸರಿದು ನಿಂತಿದೆ. ಲಾರಿಯ ಚಕ್ರ ಮಣ್ಣಿನಲ್ಲಿ ಹೂತು ಹೋಗಿದ್ದು ಮುಂದೆ ಬರದೆ ಬಾಕಿಯಾದ ಘಟನೆಯೂ ನಡೆಯಿತು. ವಿನಯ್ ಎಲ್ಪಕಜೆ, ಸೋಮಶೇಖರ ಪೈಕ, ಶಿವಪ್ರಸಾದ್ ಎಲ್ಪಕಜೆ, ದೀಪಕ್ ಪೈಕ, ತಾಜುದ್ದೀನ್ ಅರಂತೋಡು ಹಾಗೂ ವಾಹನ ಚಾಲಕರು ಸಹಕರಿಸಿದರು.