ಕಾಸರಗೋಡು: ಜಿಲ್ಲೆಯಾದ್ಯಂತ ಮಂಗಳವಾರ ಉತ್ತಮ ಮಳೆ ಯಾಗಿದೆ. ಸಂಜೆ 5ಕ್ಕೆ ಆರಂಭಗೊಂಡ ಮಳೆ ರಾತ್ರಿಯ ವರೆಗೂ ಸುರಿಯಿತು.
ನವೀಕರಣ ಕಾಮಗಾರಿ ನಡೆಯು ತ್ತಿರುವ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರೋಡ್‌ನಲ್ಲಿ ಮಳೆ ನೀರು ನಿಂತು ವಾಹನ ಸಂಚಾರ ದುಸ್ತರವಾಗಿದೆ.
ಉಪ್ಪಳ ರೈಲ್ವೇ ಗೇಟ್ ಸಮೀಪ ಚರಂಡಿಯಲ್ಲಿ ಮಣ್ಣು ತುಂಬಿ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ಹರಿದು ದ್ವಿಚಕ್ರ ವಾಹನ ಸಹಿತ ವಿವಿಧ ವಾಹನ ಸಂಚಾರ ದುಸ್ತರವಾಗಿದೆ. ನೀರು ಹರಿದು ಹೋಗಲು ಸಣ್ಣ ಗಾತ್ರದ ತೂತುಗಳನ್ನು ಮಾಡಿದ್ದರೂ ಮಣ್ಣು ತುಂಬಿ ನೀರು ಸರಾಗವಾಗಿ ಹರಿಯದಂತಾಗಿದೆ. ಮಳೆ ನೀರು ತುಂಬಿರುವುದರಿಂದ ಸರ್ವೀಸ್ ರೋಡ್‌ನಲ್ಲಿ ವಾಹನ ದಟ್ಟಣೆಯಿಂದಾಗಿ ಪದೇಪದೆ ಬ್ಲಾಕ್ ಆಗುತ್ತಿದೆ. ಅಡ್ಕತ್ತಬೈಲು ಶಾಲೆ ಪರಿಸರದಲ್ಲಿ ಹೆದ್ದಾರಿ ಎತ್ತರದಲ್ಲಿದ್ದು, ಅಲ್ಲಿ ತುಂಬಿದ ನೀರು ಕೆಳಭಾಗದ ಲ್ಲಿರುವ ಸರ್ವಿಸ್ ರಸ್ತೆಯ ಮೇಲೆ ಜಲಪಾತದಂತೆ ಬೀಳುತ್ತಿದೆ. ಇದರ ವೀಡಿಯೋ ವೈರಲ್ ಆಗಿದೆ.
ಮನೆ ಕುಸಿತ
ಮಡಿಕೈಯ ಎಚ್ಚಿಕಾನದ ಪುಷ್ಪಾ ಅವರ ಮನೆ ಕುಸಿದು ಬಿದ್ದಿದೆ. ಶಬ್ದ ಕೇಳಿ ಮನೆಯ ಲ್ಲಿದ್ದವರು ಹೊರಗೆ ಓಡಿದ್ದರಿಂದ ಸಂಭವನೀಯ ದುರಂತ ತಪ್ಪಿದೆ.