ನವದೆಹಲಿ: ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ರೈಲ್ವೆ ಇಲಾಖೆಯು ಜು.18ರಿಂದ ಜು.23ರವರೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
24 ರಾಜ್ಯಗಳ 75 ರೈಲ್ವೆ ನಿಲ್ದಾಣಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಹಾಗೂ ಮಂಗಳೂರಿನಿಂದ ಜಮ್ಮುವಿಗೆ ತೆರಳುವ ನವ್‌ಯುಗ್ ಎಕ್ಸ್‌ಪ್ರೆಸ್ ಸೇರಿ ಒಟ್ಟು 27 ರೈಲುಗಳನ್ನು ವಿಶೇಷವಾಗಿ ಪರಿಗಣಿಸಲಾಗಿದ್ದು, ಅವುಗಳನ್ನು ವಿಶೇಷವಾಗಿ ಸಿಂಗರಿಸಲಾಗುವುದು.
ವಾರ ಪೂರ್ತಿ ನಡೆಯುವ ಉತ್ಸವವನ್ನು “ಆಜಾದಿ ಕಾ ರೈಲ್ ಗಾಡಿ’ ಎಂದು ಕರೆಯಲಾಗಿದೆ.
ಉತ್ಸವಕ್ಕೆಂದು ಗುರುತಿಸಲಾಗಿರುವ ನಿಲ್ದಾಣಗಳನ್ನು “ಸ್ವತಂತ್ರ ನಿಲ್ದಾಣ’ ಎಂದು ಕರೆಯಲಾಗುವುದು ಹಾಗೂ ರೈಲುಗಳನ್ನು “ಸ್ಪಾಟ್‌ಲೈಟ್ ರೈಲು’ ಎಂದು ಕರೆಯಲಾಗುವುದು.
ಈ ನಿಲ್ದಾಣಗಳಲ್ಲಿ ಫೋಟೋ ಪ್ರದರ್ಶನ ನಡೆಸಲಾಗುವುದು ಹಾಗೂ ಆಜಾದಿ ಕಾ ರೈಲ್ ಗಾಡಿ ಎನ್ನುವ ಬ್ಯಾಕ್‌ಡ್ರಾಪ್ ಇರುವಂತಹ ಸೆಲ್ಫಿ ಸ್ಟಾಂಡ್ ಇಡಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.