ಮಂಗಳೂರು: ಪಾಲಕ್ಕಾಡ್ ವಿಭಾಗದ ವಿವಿಧ ಕಡೆ ಎಂಜಿನಿಯರಿಂಗ್ ಕಾಮಗಾರಿಗಳ ಕಾರಣ ದಕ್ಷಿಣ ರೈಲ್ವೇಯ ಹಲವು ಸೇವೆಗಳು ವ್ಯತ್ಯಯವಾಗಲಿವೆ.
ಫೆ. 10ರಂದು ನಂ. 16312 ಕೊಚ್ಚುವೇಲಿ-ಶ್ರೀ ಗಂಗಾನಗರ್ ಎಕ್ಸ್ ಪ್ರಸ್ ಕೊಚ್ಚುವೇಲಿಯಿಂದ ಮಧ್ಯಾಹ್ನ 3.45ರ ಬದಲು 4.15 ಗಂಟೆ ತಡವಾಗಿ ರಾತ್ರಿ 8ಕ್ಕೆ ಹೊರಡಲಿದೆ. ಇದೇ ರೈಲು ಫೆ. 17ರಂದು ಕೊಚ್ಚುವೇಲಿಯಿಂದ 6.15ಕ್ಕೆ, ಫೆ. 24ರಂದು 3.45 ಗಂಟೆ ತಡವಾಗಿ 7.30ಕ್ಕೆ, ಮಾರ್ಚ್ 2ರಂದು 4 ಗಂಟೆ ತಡವಾಗಿ 7.45ಕ್ಕೆ ಹೊರಡಲಿದೆ.
ಫೆ. 10ರಂದು ನಂ. 22637 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ಮಂಗಳೂರು ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಚೆನ್ನೈಯಿಂದ ಮಧ್ಯಾಹ್ನ 1.25ರ ಬದಲು 3.15 ಗಂಟೆ ತಡವಾಗಿ ಸಂಜೆ 4.40ಕ್ಕೆ ಹೊರಡಲಿದೆ. ಇದೇ ರೈಲು ಫೆ. 17ರಂದು ಸಂಜೆ 2.55ಕ್ಕೆ, ಫೆ.24ರಂದು ಸಂಜೆ 4.10ಕ್ಕೆ, ಮಾ. 2ರಂದು ಸಂಜೆ 4.25ಕ್ಕೆ ಹೊರಡಲಿದೆ.
ನಂ.02197 ಕೊಯಂಬತ್ತೂರು ಜಬಾಲ್ಪುರ ಎಕ್ಸ್‌ಪ್ರೆಸ್ ರೈಲು ಫೆ.19,26ರಂದು ಕೊಯಂಬತ್ತೂರಿನಿಂದ ಸಂಜೆ 5.05ರ ಬದಲಾಗಿ 5.55ಕ್ಕೆ ಹೊರಡಲಿದೆ. ನಂ.16349 ಕೊಚ್ಚುವೇಲಿ ಎಕ್ಸ್‌ಪ್ರೆಸ್ ಕೊಚ್ಚುವೇಲಿಯಿಂದ ರಾತ್ರಿ 8.50ಕ್ಕೆ ಹೊರಡುವ ಬದಲು ಫೆ. 16, 17, 23 ಹಾಗೂ 24ರಂದು 1.40 ಗಂಟೆ ತಡವಾಗಿ 10.30ಕ್ಕೆ ಹೊರಡಲಿದೆ.
ನಂ.22638 ಮಂಗಳೂರು ಸೆಂಟ್ರಲ್-ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ರೈಲು ಮಂಗಳೂರು ಸೆಂಟ್ರಲ್ ನಿಂದ ಫೆ. 8, 29ರಂದು ನಿಗದಿತ ಸಮಯ ರಾತ್ರಿ 11.45ರ ಬದಲು ಫೆ. 9, 30ರಂದು 2 ಗಂಟೆ ತಡವಾಗಿ ಮುಂಜಾನೆ 1.45ಕ್ಕೆ ತೆರಳಲಿದೆ. ಇದೇ ರೈಲು ಫೆ. 22ರಂದು ಒಂದು ಗಂಟೆ ತಡವಾಗಿ ಫೆ. 22ರ 12.45ಕ್ಕೆ ತೆರಳಲಿದೆ.
ನಂ. 06062 ನಾಗರಕೋವಿಲ್ ಜಂಕ್ಷನ್-ಮಂಗಳೂರು ಜಂಕ್ಷನ್ ರೈಲು ಫೆ. 24ರಂದು ನಾಗರಕೋವಿಲ್ ನಿಂದ ಮಧ್ಯಾಹ್ನ 2.45ರ ಬದಲಾಗಿ ಸಂಜೆ 6ಕ್ಕೆ ಹೊರಡಲಿದೆ. ಇದೇ ರೈಲು ಮಾ. 2ರಂದು ಸಂಜೆ 6.15ಕ್ಕೆ ಹೊರಡಲಿದೆ.
ನಿಲ್ದಾಣ ಬದಲು
ನಂ. 22638 ಮಂಗಳೂರು ಸೆಂಟ್ರಲ್-ಚೆನ್ನೈ ವೆಸ್ಟ್‌ಕೋಸ್ಟ್ ರೈಲು ಫೆ. 15ರಂದು ರಾತ್ರಿ 11.45ಕ್ಕೆ ಮಂಗಳೂರು ಸೆಂಟ್ರಲ್ ಬದಲಾಗಿ ಮಂಗಳೂರು ಜಂಕ್ಷನ್‌ನಿಂದ ಫೆ. 16ರ ಮುಂಜಾನೆ 12.30ಕ್ಕೆ ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ.