Advertisement

ದಿಲ್ಲಿಯಲ್ಲಿ ಚಿಕಿತ್ಸೆಗೆ ರೈಲ್ವೇ ವಾರ್ಡ್‌

08:04 AM Jun 02, 2020 | mahesh |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಐಸೋಲೇಷನ್‌ ವಾರ್ಡ್‌ಗಳಾಗಿ ಪರಿವರ್ತಿತವಾಗಿರುವ ರೈಲ್ವೇ ಬೋಗಿಗಳನ್ನು ಬಳಸಲು ನಿರ್ಧರಿಸಲಾಗಿದೆ. ಎರಡೂವರೆ ತಿಂಗಳ ಹಿಂದೆ 5, 321 ಬೋಗಿಗಳನ್ನು ವಾರ್ಡ್‌ಗಳನ್ನಾಗಿ ಪರಿವರ್ತಿಸಿ, ಸಿದ್ಧಗೊಳಿಸಿತ್ತು. ಇದೀಗ ಮೊದಲ ಬಾರಿಗೆ ದಿಲ್ಲಿಯಲ್ಲಿ ಅದರ ಬಳಕೆ ಮಾಡಲಾಗುತ್ತಿದೆ. ಹತ್ತು ಬೋಗಿಗಳಲ್ಲಿ 160 ಹಾಸಿಗೆ ಸಾಮರ್ಥ್ಯ ವ್ಯವಸ್ಥೆಯನ್ನು ದಿಲ್ಲಿ ಸರಕಾರ ಸೋಂಕಿತರ ಚಿಕಿತ್ಸೆಗಾಗಿ ಬಳಕೆ ಮಾಡಲು ಮುಂದಾಗಿದೆ. ಹವಾನಿಯಂತ್ರಿತ 3 ಬೋಗಿಗಳನ್ನು ವೈದ್ಯರು ಮತ್ತು ವೈದ್ಯಕೀಯ ಸಿಬಂದಿಗಾಗಿ ಬಳಕೆ ಮಾಡಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next