Advertisement

ರೈಲ್ವೆ ಅಂಡರ್‌ ಪಾಸೇಜ್‌: ಆಗ್ರಹ

07:35 AM Apr 24, 2018 | Team Udayavani |

ಕುಂಬಳೆ: ಹಲವು ವರ್ಷಗಳ ಹಿಂದೆ ಮಂಗಳೂರು ಕೇರಳ ರೈಲ್ವೆ ಹಳಿ ದ್ವಿಗುಣಗೊಳಿಸುವಾಗ ಕುಂಬಳೆ ಬಳಿಯ ಮೊಗ್ರಾಲ್‌ ಕೊಪ್ಪಳ ನಿವಾಸಿಗರು ದ್ವೀಪ ವಾಸಿಗಳಾಗಬೇಕಾಯಿತು.ಇಲ್ಲಿನವರಿಗೆ ರಸ್ತೆ ಸಂಪರ್ಕ ಕಡಿತು ಹೋಯಿತು.

Advertisement

ರಸ್ತೆ ಸಂಪರ್ಕಕಕ್ಕಾಗಿ ರೈಲ್ವೆ ಸೇತುವೆ ಬಳಿಯಲ್ಲಿ ಅಂಡರ್‌ ಪಾಸೇಜ್‌ ನಿರ್ಮಿಸಬೇಕೆಂಬುದಾಗಿ ಸ್ಥಳೀಯ ನಿವಾಸಿಗಳು ಮತ್ತು ವಿವಿಧ ಸಂಘಟನೆಗಳು ರೈಲ್ವೆ ಇಲಾಖೆಯ ಅಧಿಕಾರಿಗಳಲ್ಲಿ ಮತ್ತು ಕೇಂದ್ರ ರಾಜ್ಯಗಳ ಚುನಾಯಿತ ಪ್ರತಿನಿಧಿಗಳ‌ಲ್ಲಿ ಮನವಿ ಮೂಲಕ ಒತ್ತಾಯಿಸಿದ್ದರು.ಇದನ್ನು ಪರಿಗಣಿಸಿ ಸರಕಾರ ಅಂಡರ್‌ ಪಾಸೇಜ್‌ ನಿರ್ಮಿಸಲು ನಿಧಿ ಮಂಜೂರು ಮಾಡಿದೆ.

ರೈಲ್ವೆ ಮುಖ್ಯ ಕಾರ್ಯದರ್ಶಿಯವರು ವಿಶೇಷ ಆಸಕ್ತಿ ವಹಿಸಿ ಸೇವೆಯಿಂದ ನಿವೃತ್ತರಾಗಲಿರುವ ಮುನ್ನಾ ದಿನದಂದು ಯೋಜನೆಗೆ ತರಾತುರಿಯಲ್ಲಿ ತಾಂತ್ರಿಕ ಆಡಳಿತ ಅನುಮತಿಯನ್ನೂ ನೀಡಿದ್ದರು.ಆದರೆ ಯೋಜನೆಗೆ ಮಂಜೂರುಗೊಂಡ ನಿಧಿಯನ್ನು ಸರಕಾರ ಇಲಾಖೆಗೆ ಕಳೆದ ಮಾರ್ಚ್‌ ತಿಂಗಳಲ್ಲಿ ಪಾವತಿಸದ ಕಾರಣ ಕಾಮಗಾರಿಗೆ ತೊಡಕಾಗಿರುವುದಾಗಿ ಸ್ಥಳೀಯರು ಆರೋಪಿಸುತ್ತಿರುವರು. ಸಕಾಲದಲ್ಲಿ ನಿಧಿ ಪಾವತಿಸುತ್ತಿದ್ದಲ್ಲಿ ಕಾಮಗಾರಿ ಎಂದೋ ನಡೆಯುತ್ತಿತ್ತು.ಸಮಸ್ಯೆ ಪರಿಹಾರವಾಗುತ್ತಿತ್ತು.ಆದರೆ ಸರಕಾರದ “ನಿಧಾನವೇ ಪ್ರಧಾನ’ ಎಂಬ ನೀತಿಯಿಂದಲಾಗಿ ಮೊಗ್ರಾಲ್‌ ಕೊಪ್ಪಳ ನಿವಾಸಿಗರು ರಸ್ತೆ ಸಂಪರ್ಕದಿಂದ ವಂಚಿತರಾಗಿರುವರು.ಈ ಸಮಸ್ಯೆಗೆ ಇನ್ನಾದರೂ ಪರಿಹಾರ ಕಾಣದಿದ್ದಲ್ಲಿ ಸಂಘಟಿತರಾಗಿ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

ಬೆಸ್ತರೇ ಹೆಚ್ಚಾಗಿ ವಾಸವಾಗಿರುವ ಈ ಪ್ರದೇಶ ನಿವಾಸಿಗಳ ಚಿರಕಾಲದ ಬೇಡಿಕೆಯನ್ನು ಪರಿಗಣಿಸಿ ಇನ್ನಾದರೂ ಅಂಡರ್‌ ಪಾಸೇಜ್‌ ನಿರ್ಮಿಸಬೇಕೆಂಬುದಾಗಿ ಮೊಗ್ರಾಲ್‌ ದೇಶೀಯ ವೇದಿ ಸಂಘಟನೆ ಸಂಭಂಧಪಟ್ಟವರಲ್ಲಿ ವಿನಂತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next