Advertisement
ಆಗಬೇಕಾದ ಕೆಲಸಗಳನ್ನು ಮನಗಂಡು, ಅಗತ್ಯವಿರುವ ತಾಂತ್ರಿಕ ಸಲಹೆ ನೀಡುವುದಕ್ಕಾಗಿ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ ಅವರು ಈ ರೈಲಿನಲ್ಲಿ ಇತರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳ ಪರಿಶೀಲಿಸಿ, ಭೂಕುಸಿತ ಪ್ರದೇಶದಲ್ಲಿ ಸುಧಾರಣ ಕೆಲಸಗಳ ಪ್ರಗತಿ ವೀಕ್ಷಿಸಿ, ದುರಸ್ತಿ ಕೆಲಸದಲ್ಲಿ ಆಗಬೇಕಿರುವ ಸುರಕ್ಷಾ ಕ್ರಮಗಳನ್ನು ಸೂಚಿಸಿದರು.ಈ ವೇಳೆ ಮಾತನಾಡಿದ ಶ್ರೀವಾಸ್ತವ, ಸುರಕ್ಷೆ, ತ್ವರಿತವಾದ ದುರಸ್ತಿ ಕಾರ್ಯಗಳು ನಮ್ಮ ಆದ್ಯತೆ, ಇದರಲ್ಲಿ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
Related Articles
ಈ ನಡುವೆ ರೈಲು ಪ್ರಯಾಣಿಕರ ದಟ್ಟಣೆ ಹಗುರಗೊಳಿಸಲು ಮಡ ಗಾಂವ್- ಬೆಂಗಳೂರು ಮಧ್ಯೆ ಹಾಗೂ ಕಾರವಾರ ಬೆಂಗಳೂರು ಮಧ್ಯೆ ಮಂಗಳೂರು-ಶೋರನೂರು ದಾರಿಯಾಗಿ ಎರಡು ರೈಲುಗಳನ್ನು ಓಡಿಸಲಾಗುತ್ತಿದೆ.
Advertisement
ನಂ.01696 ಮಡಗಾಂವ್ ಜಂಕ್ಷನ್ ಕೆಎಸ್‌ಆರ್ ಬೆಂಗಳೂರು ಏಕಮುಖ ರೈಲು ಮಡಗಾಂವ್‌ನಿಂದ ಜು.30ರಂದು ಸಂಜೆ 4.30ಕ್ಕೆ ಹೊರಟು ಮರುದಿನ ಸಂಜೆ 3.30ಕ್ಕೆ ಬೆಂಗಳೂರು ತಲುಪಲಿದೆ. ಇದಕ್ಕೆ ಕಾನಕೋನ, ಕಾರವಾರ, ಅಂಕೋಲ, ಗೋಕರ್ಣರೋಡ್, ಕುಮಟ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಬಾಕೂìರು, ಉಡುಪಿ, ಮೂಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಕಾಸರಗೋಡು, ಕಣ್ಣೂರಿನಲ್ಲಿ ನಿಲುಗಡೆ ಇರುತ್ತದೆ.
ನಂ.01656 ಕಾರವಾರ ಯಶವಂತಪುರ ಏಕಮುಖ ರೈಲು ಜು.31ರಂದು ಕಾರವಾರದಿಂದ ಬೆಳಗ್ಗೆ 5.30ಕ್ಕೆ ಹೊರಟು ಮರುದಿನ ಮುಂಜಾನೆ 2.15ಕ್ಕೆ ಯಶವಂತಪುರ ತಲುಪಲಿದೆ. ಅಂಕೋಲ, ಗೋಕರ್ಣರೋಡ್, ಕುಮಟ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಬಾರ್ಕೂರು, ಉಡುಪಿ, ಮೂಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಕಾಸರಗೋಡು, ಕಣ್ಣೂರು ಸಹಿತ ನಿಲುಗಡೆ ಇರುತ್ತದೆ. ಈ ರೈಲಿನಲ್ಲಿ 2 ವಿಸ್ತಾಡೋಮ್ ಕೋಚ್‌ಗಳೂ ಇರಲಿವೆ.