Advertisement

Railway Track; ಎಡಕುಮೇರಿ: ರೈಲು ಮಾರ್ಗ ದುರಸ್ತಿ ಚುರುಕು

12:42 AM Jul 31, 2024 | Team Udayavani |

ಮಂಗಳೂರು: ಎಡಕುಮೇರಿ ಹಾಗೂ ಕಡಗರವಳ್ಳಿ ನಡುವೆ ರೈಲು ಮಾರ್ಗದಲ್ಲಿ ಆಗಿರುವ ಭೂಕುಸಿತದ ಪ್ರದೇಶಲ್ಲಿ ದುರಸ್ತಿ ಕಾರ್ಯಗಳು ಚುರುಕಾಗಿ ನಡೆಯುತ್ತಿವೆ.

Advertisement

ಇದುವರೆಗೆ 1900 ಘನ ಅಡಿಗಳಷ್ಟು ಬಂಡೆಗಳನ್ನು ಜೋಡಿಸಲಾಗಿದೆ. ಸಂಪೂರ್ಣ ಸುಧಾರಣೆಗೆ ಇನ್ನೂ 2000 ಘನ ಅಡಿ ಬಂಡೆಗಳ ಅಗತ್ಯವಿದೆ. 1 ಲಕ್ಷ ಮರಳ ಚೀಲಗಳು ಅಗತ್ಯವಿದ್ದು ಈಗಾಗಲೇ 93,200 ಚೀಲಗಳನ್ನು ಒದಗಿಸಲಾಗಿದೆ. ಅರ್ತ್‌ಮೂವರ್‌ ಮತ್ತಿತರ ಯಂತ್ರೋಪರಕಣಗಳ ಚಾಲನೆಗಾಗಿ 26 ಬ್ಯಾರೆಲ್‌ ಡೀಸೆಲ್‌ ಪೂರೈಸಲಾಗಿದೆ.

ಒಟ್ಟಾರೆ ಈಗಾಗಲೇ ಕಾರ್ಯೋನ್ಮು ಖವಾಗಿರುವ 11 ಹಿಟಾಚಿ/ಪಾಕ್‌ಲೈನ್‌ ಅರ್ತ್‌ಮೂವರ್‌ ಮಷಿನ್‌ಗಳ ಜತೆಗೆ ಎರಡು ಹೆಚ್ಚುವರಿ ಹಿಟಾಚಿಗಳನ್ನೂ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಸುರಿಯುತ್ತಿರುವ ಮಳೆಯ ಹೊರತಾಗಿಯೂ ಮಂಗಳವಾರ ಕಾರ್ಮಿಕರು 23 ವ್ಯಾಗನ್‌ಗಳಷ್ಟು ಬಂಡೆಗಳನ್ನು ಕೆಳಗಿಳಿಸಿದ್ದಾರೆ. ಇದುವರೆಗೆ ಒಟ್ಟು 94 ವ್ಯಾಗನ್‌ ಬಂಡೆಗಳನ್ನು ಈ ಪ್ರದೇಶಕ್ಕೆ ಇಳಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಚಾರ್ಮಾಡಿ ಘಾಟಿ: ರಸ್ತೆಗೆ ಉರುಳಿದ ಮರ, ತೆರವು
ಬೆಳ್ತಂಗಡಿ:
ಚಿಕ್ಕಮಗಳೂರು ಹಾಗೂ ಬೆಳ್ತಂಗಡಿ ಭಾಗದಲ್ಲಿ ಮಳೆ ಹೆಚ್ಚಿದ ಪರಿಣಾಮ ಜು.30ರಂದು ಮುಂಜಾನೆ ಚಾರ್ಮಾಡಿ ಘಾಟಿಯ ರಸ್ತೆಗೆ ಮರ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ತತ್‌ಕ್ಷಣ ಕೊಟ್ಟಿಗೆಹಾರ ಭಾಗದಲ್ಲಿ ವಾಹನ ಸಂಚಾರ ತಡೆಹಿಡಿಯಲಾಯಿತು. ಬಳಿಕ ತೆರವು ಕಾರ್ಯ ನಡೆಸಿ ಮಧ್ಯಾಹ್ನದೊಳಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next