Advertisement

ಜನರ ಜೀವನಾಡಿಯಾಗಿ ರೈಲ್ವೆ ಇಲಾಖೆ ಕಾರ್ಯ: ಸಚಿವ ಅಂಗಡಿ

08:39 AM Jul 25, 2020 | Suhan S |

ಬೆಳಗಾವಿ: ರೈಲ್ವೆ ಇಲಾಖೆಯು ಜನರ ಜೀವನಾಡಿಯಾಗಿ ಕೆಲಸ ಮಾಡುತ್ತಿದ್ದು ಕೋವಿಡ್‌-19 ಸಮಯದಲ್ಲಿ ವಲಸೆ ಕಾರ್ಮಿಕರಿಗೆ ವಿವಿಧ ರಾಜ್ಯಗಳಲ್ಲಿ ಪ್ರಯಾಣಿಸಲು ಅನುಕೂಲತೆ ಕಲ್ಪಿಸಿ ಅವರಿಗೆ ನರೇಗಾ ಯೋಜನೆಯಡಿ ಉದ್ಯೋಗಾವಕಾಶ ಒದಗಿಸಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

Advertisement

ಕಾನ್‌ಫೆಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರೇಜ್‌ (ಸಿಐಐ) ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ನ್ಯೂ ಏಜ್‌ ಕನೇಕ್ಟಿವಿಟಿ ಮತ್ತು ಲಾಜಿಸ್ಟಿಕ್ಸ್‌ ವಿಷಯದ ಕುರಿತು ವೀಡಿಯೋ ಸಂವಾದದಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಭಾರತ ಯೋಜನೆಯಡಿ ದೇಶವನ್ನು ಅಭಿವೃದ್ಧಿ ಪಥದತ್ತ ಕರೆದೊಯ್ಯಬಹುದಾಗಿದೆ. ಇದರಿಂದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಲಭಿಸಲಿದೆ ಎಂದರು.

ಕಾರ್ಮಿಕರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗಿದೆ. ವೋಕಲ್‌ ಫಾರ್‌ ಲೋಕಲ್‌ ಅಡಿ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸುವುದು ಇಂದಿನ ದಿನದಲ್ಲಿ ಅವಶ್ಯಕವಾಗಿದೆ. ಕೃಷಿ , ಜವಳಿ , ಆಹಾರ ಸಂಸ್ಕರಣ ಘಟಕ ಉದ್ಯಮಗಳನ್ನು ಸ್ಥಾಪಿಸಲು ಯುವಕರು ಮುಂದೆ ಬರಬೇಕು ಎಂದು ಸಚಿವರು ಪ್ರತಿಪಾದಿಸಿದರು . ಮೇಕ್‌ ಇನ್‌ ಇಂಡಿಯಾ ಅಡಿ ದೇಶವನ್ನು ಸದೃಡಪಡಿಸಲು ಅನುಕೂಲವಾಗುತ್ತಿದೆ ಎಂದು ರೇಲ್ವೆ ಸಚಿವರು ಪ್ರಸ್ತಾಪಿಸಿದರು. ಅಶೋಕ ಐರನ್‌ ವರ್ಕ್ಸ್ ಎಂ.ಡಿ ಜಯಂತ ಹುಂಬರವಾಡಿ, ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ ಕುಮಾರ ಮೌರ್ಯ, ಸಿಐಐನ ಮಹಿಂದರ ಸಂವಾದದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next