ನವದೆಹಲಿ:ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಲೋಕಸಭೆಯಲ್ಲಿ ಮಂಡಿಸಿರುವ ಬಜೆಟ್ ನಲ್ಲಿ ಭಾರತೀಯ ರೈಲ್ವೆ ಇಲಾಖೆಗೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ.
1)ಮುಂದಿನ ಕೆಲವು ವರ್ಷಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ಪಿಪಿಪಿ(ಪಬ್ಲಿಕ್, ಪ್ರೈವೇಟ್ ಸಹಭಾಗಿತ್ವ) ಮಾದರಿ ಮೂಲಕ ಸುಮಾರು 150 ಖಾಸಗಿ ರೈಲುಗಳು ಓಡಾಡುವ ಯೋಜನೆ ಜಾರಿಯಾಗಲಿದೆ.
2)ದೇಶದ ಪ್ರಮುಖ ಪ್ರವಾಸೋದ್ಯಮ ಮಾರ್ಗಗಳಲ್ಲಿ ತೇಜಸ್ ಎಕ್ಸ್ ಪ್ರಸ್ ಮಾದರಿಯ ರೈಲುಗಳ ಓಡಾಟಕ್ಕೆ ಯೋಜನೆ ಸಿದ್ಧಪಡಿಸಲಾಗುವುದು.
3)ದೇಶದ ಸಾವಿರಾರು ರೈಲು ನಿಲ್ದಾಣಗಳಲ್ಲಿ ಅತೀ ವೇಗದ ಉಚಿತ ವೈ-ಫೈ, ಅಹಮದಾಬಾದ್-ಮುಂಬೈ ನಡುವೆ ಸಂಚರಿಸಲಿರುವ ದೇಶದ ಮೊದಲ ಬುಲೆಟ್ ರೈಲು ಯೋಜನೆಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲಾಗುವುದು
4)ರೈಲ್ವೆ ಮಾರ್ಗಗಳಲ್ಲಿನ ಮಾನವ ರಹಿತ ಕ್ರಾಸಿಂಗ್ ನೆಟ್ ವರ್ಕ್ ಗಳನ್ನು ತೆಗೆದು ಹಾಕುವಲ್ಲಿ ರೈಲ್ವೆ ಇಲಾಖೆ ಯಶಸ್ಸು ಸಾಧಿಸಿದೆ.
5)ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದ ಮಾದರಿ ಮೂಲಕ ಬೆಂಗಳೂರಿನಲ್ಲಿ ಸಬ್ ಅರ್ಬನ್ ಯೋಜನೆ ಜಾರಿಗೆ ಅನುಮತಿ. ಒಟ್ಟು 18,600 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲ್ವೆ ಮಾರ್ಗ ನಿರ್ಮಾಣ.