ವಿಜಯಪುರ: ಇಂಡಿ ಉಪ ವಿಭಾಗಾಧಿಕಾರಿ ರಾಹುಲ್ ಶಿಂಧೆ ನೇತೃತ್ವದಲ್ಲಿ ಕಂದಾಯ, ಪೊಲೀಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಸಿಂದಗಿ ತಾಲೂಕಿನ ಭೀಮಾ ನದಿ ಪಾತ್ರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಸಿಂದಗಿ ತಾಲೂಕಿನ ದೇವಣಗಾಂವ ಮತ್ತು ಶಂಬೆವಾಡ ಗ್ರಾಮ ವ್ಯಾಪ್ತಿಯ ಭೀಮಾ ನದಿ ಪಾತ್ರದಲ್ಲಿ ಅನಿರೀಕ್ಷಿತವಾಗಿ ದಾಳಿ ನಡೆಸಿ 629 ಕ್ಯೂಬಿಕ್ ಮೀಟರ್ ಅನಧಿಕೃತ ಮರಳನ್ನು ವಶಕ್ಕೆ ಪಡೆದಿದೆ.
ಇದನ್ನೂ ಓದಿ:ಇವರೇನು ಶೋಕಿ ಮಾಡುವುದಕ್ಕೆ ಬಂದಿದ್ದಾ? : ಆರ್. ಅಶೋಕ್ ವಿರುದ್ಧ ಮೀನುಗಾರರ ಆಕ್ರೋಶ
ಎರಡು ಕಡೆ ಈ ದಾಳಿ ನಡೆಸಲಾಗಿದ್ದು, ಕ್ರಮವಾಗಿ ದೇವಣಗಾಂವ ಗ್ರಾಮದ ಎರಡು ಸ್ಥಳಗಳಲ್ಲಿ 294 ಕ್ಯೂಬಿಕ್ ಮೀಟರ್ ಹಾಗೂ ಶಂಭೇವಾಡ ಗ್ರಾಮದ ಎರಡು ಸ್ಥಳಗಳಲ್ಲಿ 335 ಕ್ಯೂಬಿಕ್ ಮೀಟರ್ ಗಳಂತೆ ಒಟ್ಟು 629 ಕ್ಯೂಬಿಕ್ ಮೀಟರ್ ಮರಳನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಅಕ್ರಮ ಮರಳು ಅಂದಾಜು 5,31,505 ರೂ. ಮೌಲ್ಯದಾಗಿದ್ದು, ಆಲಮೇಲ ಪೊಲೀಸ್ ಠಾಣೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಾಗಿದೆ ಎಂದು ಉಪ ವಿಭಾಗ ಅಧಿಕಾರಿ ಶಿಂಧೆ ತಿಳಿಸಿದ್ದಾರೆ.