Advertisement

ವಲಸೆ ಕಾರ್ಮಿಕರನ್ನು ತವರು ರಾಜ್ಯಕ್ಕೆ ಕಳುಹಿಸಲು ಕ್ರಮ

06:02 PM May 16, 2020 | Team Udayavani |

ರಾಯಚೂರು: ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ಸಿಲುಕಿಕೊಂಡ ಹೊರ ರಾಜ್ಯಗಳ ಕಾರ್ಮಿಕರನ್ನು ಸುರಕ್ಷಿತವಾಗಿ ತಮ್ಮ ರಾಜ್ಯಗಳಿಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಡಿಸಿ ಆರ್‌. ವೆಂಕಟೇಶ ಕುಮಾರ್‌ ಸೂಚಿಸಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಮಾತನಾಡಿ, ನಾನಾ ಕಾರಣಕ್ಕೆ ಆಗಮಿಸಿ ಜಿಲ್ಲೆಯಲ್ಲೇ ಸಿಲುಕಿದವರನ್ನು ಅವರ ರಾಜ್ಯಗಳಿಗೆ ಕಳುಹಿಸಲು ಜಿಲ್ಲೆಯಲ್ಲಿ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ. ಎಡಿಸಿ ಸಮಿತಿ ಅಧ್ಯಕ್ಷರಾಗಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಸದಸ್ಯರಾಗಿರುತ್ತಾರೆ ಎಂದರು.

ಈ ತಿಂಗಳ 20 ರಿಂದ 22ರೊಳಗೆ ಮೊದಲಿಗೆ ಉತ್ತರ ಪ್ರದೇಶದ ಕಾರ್ಮಿಕರನ್ನು ಕಳುಹಿಸಲಾಗುವುದು. ಬಳಿಕ ಮಧ್ಯಪ್ರದೇಶ, ಬಿಹಾರ ಹಾಗೂ ಜಾರ್ಖಂಡ್‌ ಜನರನ್ನು ಕಳುಹಿಸಲಾಗುವುದು. ವಲಸಿಗರನ್ನು ಈಗಾಗಲೇ ಗುರುತಿಸಿ ಪಟ್ಟಿ ಮಾಡಲಾಗಿದೆ. ಉತ್ತರ ಪ್ರದೇಶದ 457, ಬಿಹಾರದ 272, ಜಾರ್ಖಂಡ್‌ನ‌ 168 ಹಾಗೂ ಮಧ್ಯ ಪ್ರದೇಶದ 131 ಕಾರ್ಮಿಕರು ಜಿಲ್ಲೆಯಲಿದ್ದಾರೆ ಎಂದು ವಿವರಿಸಿದರು.

ಅವರನ್ನು ಕಲಬುರಗಿ, ಬಳ್ಳಾರಿ ಹಾಗೂ ಹುಬ್ಬಳ್ಳಿಯ ರೈಲು ನಿಲ್ದಾಣಗಳಿಂದ ಕಳುಹಿಸಲಾಗುವುದು. ಬಸ್‌ಗಳ ಮೂಲಕ ಈ ರೈಲು ನಿಲ್ದಾಣಗಳಿಗೆ ಕಳುಹಿಸಬೇಕು. ಬಸ್‌ ಹಾಗೂ ರೈಲು ಪ್ರಯಾಣದ ಟಿಕೆಟ್‌ ದರಗಳನ್ನು ಸಂಬಂಧಿಸಿದವರೇ ಪಾವತಿಸಬೇಕು. ಈ ಬಗ್ಗೆ ಆಯಾ ರಾಜ್ಯಗಳಿಗೆ ಮೊದಲ ಸುತ್ತಿನಲ್ಲಿ ದೂರವಾಣಿ ಮೂಲಕ ಮಾಹಿತಿ ನೀಡಲಾಗಿದೆ. ಅವರನ್ನು ಕಳುಹಿಸುವ ದಿನಾಂಕ ಹಾಗೂ ವಿವರವನ್ನು ಎಸ್‌ ಎಂಎಸ್‌ ಮೂಲಕ ಸಂಬಂಧಿ ಸಿದವರಿಗೆ ತಿಳಿಸುವುದಾಗಿ ತಿಳಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next