Advertisement

ರಾಯಚೂರು: ಅನ್‌ಲಾಕ್‌ ಮೊದಲ ದಿನವೇ ಜನರ ಲಗ್ಗೆ

08:08 PM Jun 22, 2021 | Team Udayavani |

ರಾಯಚೂರು:ಕೋವಿಡ್ ಎರಡನೇ ಅಲೆ ಹತೋಟಿ ಬಂದ ಕಾರಣ ಜಿಲ್ಲಾಡಳಿತ ಸೋಮವಾರ ಅನ್‌ ಲಾಕ್‌ ಮಾಡುತ್ತಿದ್ದಂತೆ ಜಿಲ್ಲೆಯಲ್ಲಿ ಮಾರುಕಟ್ಟೆಗಳು ಜನಜಂಗುಳಿಯಿಂದ ತುಂಬಿ ಹೋಗಿತ್ತು. ಜನ ಏಕಕಾಲಕ್ಕೆ ವ್ಯಾಪಾರ ವಹಿವಾಟಿಗೆ ಆಗಮಿಸಿದ್ದರಿಂದ ಅಲ್ಲಲ್ಲಿ ಟ್ರಾಫಿಕ್‌ ಜಾಮ್‌ ಕೂಡ ಉಂಟಾಯಿತು.

Advertisement

ಬೆಳಗ್ಗೆ 6 ಗಂಟೆಯಿಂದ ಸಂಜೆ 5ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶವಿತ್ತು. ಹೀಗಾಗಿ ಅಂಗಡಿ ಮುಂಗ್ಗಟ್ಟುಗಳ ಮುಂದೆ ಜನದಟ್ಟಣೆ ಹೆಚ್ಚಾಗಿತ್ತು. ಜನ, ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲದ ಕಾರಣ ನಗರದ ಪ್ರಮುಖ ರಸ್ತೆಗಳು ವಾಹನಗಳಿಂದ ತುಂಬಿ ಹೋಗಿದ್ದವು. ದಿನಸಿ, ಬಟ್ಟೆ, ಕಿರಾಣಿ, ಪಾದರಕ್ಷೆ, ಸ್ಟೀಲ್‌, ಎಲೆಕ್ಟ್ರಿಕಲ್‌, ಮೊಬೈಲ್‌, ಟಿವಿ ಸೇರಿದಂತೆ ಬಹುತೇಕ ವ್ಯಾಪಾರ ವಹಿವಾಟು ನಡೆಯಿತು.

ನಗರದ ಕೇಂದ್ರ ಬಸ್‌ ನಿಲ್ದಾಣದಿಂದ ಕೆಲ ಊರುಗಳಿಗೆ ಬಸ್‌ ಸಂಚರಿಸಿದವು. ಆದರೆ, ಬಸ್‌ ಹೊರಡುವ ಪೂರ್ವದಲ್ಲಿ ಸ್ಯಾನಿಟೇಷನ್‌ಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಲಾಗಿತ್ತು. ಅಲ್ಲದೇ ಬಸ್‌ ನ ಆಸನ ಸಾಮರ್ಥ್ಯದ ಅರ್ಧದಷ್ಟು ಪ್ರಮಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಿರುವುದು ಕಂಡು ಬಂದಿತು. ಲಸಿಕೆ ಪಡೆದ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಕರ್ತವ್ಯಕ್ಕೆ ಅವಕಾಶ ನೀಡಿದೆ. ಸಿಬ್ಬಂದಿ ಕೋವಿಡ್‌ ಪರೀಕ್ಷೆಗೊಳಿಸಿ ನೆಗೆಟಿವ್‌ ವರದಿ ಇದ್ದ ಸಿಬ್ಬಂದಿಗೆ ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಬಸ್‌ ನಿಲ್ದಾಣದಲ್ಲಿ ಕೆಲ ದಿನಗಳಿಂದ ಒಬ್ಬರು ಪ್ರಯಾಣಿಕರು
ಕಂಡು ಬಂದಿರಲಿಲ್ಲ. ಲಾಕ್‌ಡೌನ್‌ ಸಡಲಿಕೆಯಿಂದ ಬಸ್‌ ನಿಲ್ದಾಣದಲ್ಲಿ ಬೇರೆ-ಬೇರೆ ಊರುಗಳಿಗೆ ತೆರಳಲು ಜನ ಆಗಮಿಸಿದ್ದರು.

ಸಾಮಾಜಿಕ ಅಂತರ ಕಾಪಾಡಿ ಎಂದು ಪೊಲೀಸರು ಘೋಷಣೆ ಮಾಡಿದರೂ ಜನ ಮಾತ್ರ ಕ್ಯಾರೆ ಎನ್ನಲಿಲ್ಲ. ಪೊಲೀಸರು ಪೆಟ್ರೋಲಿಂಗ್‌ ಮಾಡುತ್ತಿದ್ದರು. ವಾಹನದಲ್ಲೇ ಕುಳಿತು ಜನರನ್ನು ಎಚ್ಚರಿಸುತ್ತಿದ್ದರು. ಆದರೆ, ಟ್ರಾಫಿಕ್‌ ಪೊಲೀಸ್‌ ವಾಹನವೇ ಮಹಾವೀರ ವೃತ್ತದಲ್ಲಿ ಸಿಲುಕಿಕೊಂಡಿದ್ದು ಕಂಡು ಬಂತು. ಸಾಮಾಜಿಕ ಅಂತರ ಕಾಪಾಡದೇ ಜನ ಕಣ್ಣೆದುರೇ ಬೇಕಾಬಿಟ್ಟಿ ಓಡಾಡುತ್ತಿದ್ದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಬೈಕ್‌, ಕಾರ್‌, ಆಟೋ ರಸ್ತೆಗಳಿದ ಪರಿಣಾಮ ಪದೇ-ಪದೇ ಟ್ರಾಫಿಕ್‌ ಜಾಮ್‌
ಉಂಟಾಗುತ್ತಿತ್ತು. ಇದರಿಂದ ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿತ್ತು. ಸಂಚಾರಿ ಠಾಣೆ ಪೊಲೀಸರು ರಸ್ತೆ ಸಂಚಾರ ದಟ್ಟಣೆ ತಿಳಿಗೊಳಿಸಲು ಹರಸಾಹಸ ಪಡುವಂತಾಯಿತು.

ಬಸ್‌ ಸಂಚಾರ ಶುರು ಇನ್ನೂ ನಗರ ಸೇರಿದಂತೆ ಜಿಲ್ಲೆಯಲ್ಲಿ ಬಸ್‌ ಸಂಚಾರ ಶುರುವಾಯಿತು. ಕೇಂದ್ರ ಬಸ್‌ ನಿಲ್ದಾಣದಿಂದ ವಿವಿಧೆಡೆ ಬಸ್‌ಗಳನ್ನು ಓಡಿಸಲಾಯಿತು. ಎಲ್ಲ ಬಸ್‌ಗಳಲ್ಲಿ ಸ್ಯಾನಿಟೈಸೇಶನ್‌ ಮಾಡಲಾಯಿತು. ಅಲ್ಲದೇ, ಪ್ರತಿ ಬಾರಿ ಬಸ್‌ ಬಂದಾಗಲೂ ಸ್ಯಾನಿಟೈಸೇಶನ್‌ ಮಾಡಿಯೇ ಪ್ರಯಾಣಿಕರನ್ನು ಹತ್ತಿಸಲಾಗುತ್ತಿತ್ತು. ಸಂಚಾರ ನಡೆಸಿದವು. ನೆರೆ ರಾಜ್ಯಗಳಾದ ತೆಲಂಗಾಣ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಿಂದಲೂ ನಗರಕ್ಕೆ ಬಸ್‌ಗಳ ಓಡಾಟ ಕಂಡು ಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next