Advertisement

ಸೈಕಲ್‌ ಜಾಥಾ ನಡೆಸಿ ಜನಜಾಗೃತಿ

05:30 PM Jan 02, 2022 | Team Udayavani |

ಮಾನ್ವಿ: ಪಟ್ಟಣದ ಬಸವ ವೃತ್ತದಲ್ಲಿ ರಾಯಚೂರು ರೈಡರ್ ಸಹಯೋಗದಲ್ಲಿ ಹಮ್ಮಿಕೊಂಡ ಸೈಕಲ್‌ ಜಾಥಾಕ್ಕೆ ಹೃದಯರೋಗ ತಜ್ಞ ಡಾ| ಸಕಲೇಶ ಪಾಟೀಲ್‌ ಬೆಟ್ಟದೂರು ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಅವರು, ಕೊರೊನಾ ಹೊಸ ತಳಿ ಒಮಿಕ್ರಾನ್‌ ಕುರಿತು ಭಯ ಪಡದೆ ಸಾಮಾಜಿಕ ಅಂತರ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸುವಂತೆ ಜನರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.

ರಾಯಚೂರು ಜಿಲ್ಲೆಯ ವೈದ್ಯರ ಸಮೂಹದಿಂದ ನೂತನ 2022 ಹೊಸ ವರ್ಷವನ್ನು ವಿನೂತನವಾಗಿ ಆಚರಿಸುವ ಉದ್ದೇಶದಿಂದ ವೈದ್ಯರ ತಂಡದಿಂದ ಸೈಕಲ್‌ ಮೂಲಕ ಮಾನ್ವಿ ಯಿಂದ ಹಂಪಿ ವರೆಗೆ (120 ಕಿ.ಮೀ.) ತೆರಳಿ ಮಾರ್ಗದಲ್ಲಿ ಬರುವ ಪಟ್ಟಣ ಹಾಗೂ ಗ್ರಾಮಗಳ ಜನರಿಗೆ ದೈಹಿಕ ಸದೃಢತೆಗೆ ಸೈಕಲ್‌ ಬಳಸುವುದನ್ನು ರೂಢಿಸಿಕೊಂಡಲ್ಲಿ ಮಧುಮೇಹ ಹಾಗೂ ಹೃದಯದ ಕಾಯಿಲೆಗಳು ಬರದಂತೆ ತಡೆಯಬಹುದು ಎಂದರು.

ಡಾ| ಮಂಜುನಾಥ, ಡಾ| ಬಸವರಾಜ ಪಾಟೀಲ್‌, ಡಾ| ಜಯಪ್ರಕಾಶ ಪಾಟೀಲ್‌, ಡಾ| ಸುನೀಲ್‌, ರಾಘವೇಂದ್ರ, ಪ್ರವೀಣಚೂಡ ಸೇರಿದಂತೆ ಇನ್ನಿತರರು ಸೈಕಲ್‌ ಜಾಥದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next