ರಾಯಚೂರು: ನಗರದಲ್ಲಿ ಹೊತ್ತಲ್ಲದ ಹೊತ್ತಲ್ಲಿ ಕರ್ಕಶ ಸದ್ದು ಮಾಡುತ್ತಿದ್ದ ವಾಹನಗಳ ಸೈಲೆನ್ಸರ್ ಗಳನ್ನು ನಾಶಪಡಿಸುವ ಮೂಲಕ ಪೊಲೀಸರು ಸದ್ದಡಗಿಸಿದ್ದಾರೆ.
ಜಿಲ್ಲೆಯಲ್ಲಿ ದ್ವಿಚಕ್ರ, ತ್ರಿಚಕ್ರ / ಭಾರೀ ವಾಹನಗಳಿಗೆ ದೋಷಪೂರಿತ ಹಾಗೂ ಕರ್ಕಶ ಶಬ್ಧ ಹೊರಹಾಕುವ ಸೈಲೆನ್ಸರ್ ಅಳವಡಿಸಿ ಶಬ್ಧ ಹಾಗೂ ವಾಯು ಮಾಲಿನ್ಯ ಮಾಡುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದ ರಾಯಚೂರು ಪೊಲೀಸರು, ಸೈಲೆನ್ಸರ್ ಗಳ ಮೇಲೆ ರೋಲರ್ ಹರಿಸಿ ನಾಶಪಡಿಸಿದ್ದಾರೆ.
ಇದನ್ನೂ ಓದಿ:ಮೈಸೂರು: ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ; ಸುರಕ್ಷಿತವಾಗಿ ಬಂದ ಬಾಲಕ ಹೇಳಿದ್ದೇನು?
ನಗರದ ಡಿವಿಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ನೇತೃತ್ವದಲ್ಲಿ ಸೈಲೆನ್ಸರ್ ಗಳನ್ನು ನಾಶಪಡಿಸಲಾಯಿತು. ವಾಹನಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ 2,95,500 ರೂ. ದಂಡ ವಸೂಲಿ ಮಾಡಲಾಯಿತು. ದ್ವಿಚಕ್ರ ವಾಹನಗಳಿಗೆ 1,500 ರೂ., ಲಘು- ಭಾರಿ ವಾಹನಗಳಿಗೆ 3000 ರೂ ದಂಡ ಹಾಕಲಾಯಿತು.