Advertisement

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

05:27 PM Apr 23, 2024 | Team Udayavani |

ಮಸ್ಕಿ: ಪಟ್ಟಣದ ಪಾರ್ವತಿ ನಗರದ ಬಳಗಾನೂರು ರಸ್ತೆಯಲ್ಲಿನ ಮನೆಗಳಲ್ಲಿ ಕಳ್ಳತನ ನಡೆದಿರುವ ಬಗ್ಗೆ ಏ.23ರ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

Advertisement

ನಗರದ ಮಲ್ಲಯ್ಯ ನಾಗಡದಿನ್ನಿ ಎಂಬವರ ಮನೆಯ ಬಾಗಿಲಿನ ಕೀ ಮುರಿದು 30 ಸಾವಿರ ನಗದನ್ನು ಕಳ್ಳತನ ಮಾಡಿದ್ದಾರೆ. ಬಿಸಿಲಿನ ಧಗೆಯಿಂದ ಕುಟುಂಬದವರು ಮನೆಯ ಮೇಲೆ ಮಲಗಿದ್ದ ವೇಳೆ ಈ ಘಟನೆ ನಡೆದಿದೆ.

ಮಾತ್ರವಲ್ಲದೇ ಅದೇ ಬಡಾವಣೆಯ ಬಸವರಾಜ ಕೋರಿ ಎಂಬವರ ಮನೆಯ ಬಾಗಿಲು ಮುರಿದು ಕಳ್ಳತನ ಯತ್ನ ನಡೆಸಿದ್ದಾರೆ. ಬಾಗಿಲಿಗೆ ಇಂಟರ್ ಲಾಕ್ ಸಿಸ್ಟಮ್ ಅಳವಡಿಸಿದ್ದರಿಂದ ಬೀಗ ಮುರಿಯದ ಕಾರಣ ಕಳ್ಳರು ವಾಪಾಸ್ಸಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಒಂದೇ ರಾತ್ರಿ ಎರಡು ಕಡೆ ಕಳ್ಳತನ ನಡೆದಿರುವ ಬಗ್ಗೆ ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದೆ. ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next