Advertisement

Jadkal: ಬೈಕ್‌ಗಳ ಢಿಕ್ಕಿ, ಸವಾರರಿಗೆ ಗಂಭೀರ ಗಾಯ

10:14 PM Apr 17, 2024 | Team Udayavani |

ಕೊಲ್ಲೂರು: ಜಡ್ಕಲ್‌ ಗ್ರಾಮದ ಗಂಗೆಕೊಡ್ಲು ಎಂಬಲ್ಲಿ ಬೈಕ್‌ಗಳು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಗಂಭೀರ ಗಾಯಗೊಂಡು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಟಿಪ್ಪರ್‌ ಲಾರಿಯನ್ನು ಹಿಂದಿಕ್ಕಿ ಮುಂದೆ ಸಾಗುವ ಭರದಲ್ಲಿ ಬೈಕ್‌ ಸವಾರ ಕೃಷ್ಣ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಆ ಬೈಕ್‌ ಸವಾರ ಅಶ್ವಥ್‌ ರಸ್ತೆಗೆ ಬಿದ್ದು ಗಾಯಗೊಂಡರು.

ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next