Advertisement

ನಗರಸಭೆ ಮೇಲ್ದರ್ಜೆಗೆ ಏರಲಿದೆಯೇ?

12:55 AM Feb 13, 2021 | Team Udayavani |

ಬಜೆಟ್‌ ಬಗ್ಗೆ ರಾಯಚೂರು ಜಿಲ್ಲೆಯ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದಾರೆ. ಏತನೀರಾವರಿ ಯೋಜನೆ, ಮೂಲ ಸೌಕರ್ಯ ಅಭಿವೃದ್ಧಿ, ಕೈಗಾರಿಕೆ ಸ್ಥಾಪನೆ ಆಗಲಿದೆ ಎಂಬ ಆಶಯವನ್ನು ಇಟ್ಟುಕೊಂಡಿದ್ದಾರೆ.

Advertisement

 

  1. ಟಿಎಲ್‌ಬಿಸಿ, ಎನ್‌ಆರ್‌ಬಿಸಿ ಟೆಲೆಂಡ್‌ ರೈತರಿಗೆ ನೀರೊದಗಿಸಲು ನವಲಿ ಬಳಿ ನಿರ್ಮಿಸಲು ಮುಂದಾಗಿ ರುವ ಸಮಾನಾಂತರ ಜಲಾ ಶಯ ವೇಗ, ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸ ಬೇಕಿದೆ. ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದ ಏತ ನೀರಾವರಿ ಯೋಜನೆ ಗಳಿಗೆ ಕಾಯಕಲ್ಪ ನೀಡಬೇಕಿದೆ. ಈಗ ಮುನ್ನೆಲೆಗೆ ಬಂದ ಮಸ್ಕಿ 5ಎ ಕಾಲುವೆ ಯೋಜನೆ ಜಾರಿಗೊಳಿಸಬೇಕು.

2.ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಒಪೆಕ್‌ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ನಿರ್ವಹಣೆಯನ್ನು ರಿಮ್ಸ್‌ ಸುಪರ್ದಿಗೆ ನೀಡಿದ್ದು, ಸೂಕ್ತ ಅನುದಾನ ಇಲ್ಲದೇ ಸಮಸ್ಯೆ ಎದುರಿಸುತ್ತಿದೆ. ಕೋಟ್ಯಂತರ ರೂ. ಮೌಲ್ಯದ ಯಂತ್ರೋಪಕರಣಗಳು ನಿರುಪಯುಕ್ತವಾಗಿವೆ. ಒಪೆಕ್‌ ಸ್ವಾಯತ್ತ ಸಂಸ್ಥೆಯನ್ನಾಗಿಸಿ ವಿಶೇಷ ಅನುದಾನ ಘೋಷಿಸಬೇಕಿದೆ.

  1. ರಾಯಚೂರು ಪ್ರತ್ಯೇಕ ವಿವಿ ಅನುಷ್ಠಾನ ಗೊಂಡಿದ್ದು, ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು. ಮಸ್ಕಿ, ಸಿರವಾರ ನೂತನ ತಾಲೂಕುಗಳಿಗೆ ಸೌಲಭ್ಯಗಳಿಲ್ಲದೇ ಆಡಳಿತ ನಡೆಸುತ್ತಿದ್ದು, ಕಟ್ಟಡ ಸೇರಿ ಮೂಲ ಸೌಲಭ್ಯ ಒದಗಿಸಬೇಕಿದೆ.
  2. ರಾಯಚೂರು ನಗರ ಸಭೆಯನ್ನು ಮಹಾನಗರ ಪಾಲಿಕೆ ಮಾಡಬೇಕು. ನಗರದ ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ರಿಂಗ್‌ ರೋಡ್‌ ನಿರ್ಮಾಣ ಪ್ರಸ್ತಾವನೆಗೆ ಒಪ್ಪಿಗೆ ನೀಡಬೇಕು.

5.ಜಿಲ್ಲೆಯಲ್ಲಿ ಹೊಸ ಕೈಗಾರಿಕೆ ಸ್ಥಾಪನೆಗೆ 3,700 ಎಕರೆ ಭೂ ಸ್ವಾ ಧೀನಕ್ಕೆ ಅನುದಾನ ಮೀಸಲಿಡುವ ಬೇಡಿಕೆಗೆ ಸರಕಾರ ಸ್ಪಂದಿಬೇಕಿದೆ.

ತಲಾ ಆದಾಯ :

Advertisement

95, 451 ರೂಪಾಯಿ

ಕಳೆದ  ಬಜೆಟ್‌ನಲ್ಲಿ ಯೋಜನಾ ವೆಚ್ಚ : 2.64%

ಸಚಿವರ  ಸಂಖ್ಯೆ : 00

ಮಾನವ  ಅಭಿವೃದ್ಧಿ  ಸೂಚ್ಯಂಕ  ರ್‍ಯಾಂಕ್‌ ; 27

Advertisement

Udayavani is now on Telegram. Click here to join our channel and stay updated with the latest news.

Next