Advertisement
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಈಗ ಬಿಜೆಪಿ ತೆಕ್ಕೆಯಲ್ಲಿದ್ದು ಕೈ-ಕಮಲ ಪಾಳೆಯಕ್ಕೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಈವರೆಗೆ 18 ಚುನಾವಣೆಗಳು ನಡೆದಿದ್ದು 14 ಬಾರಿ ಕಾಂಗ್ರೆಸ್ ಗೆದ್ದು ಬೀಗಿದೆ. ಅದರಲ್ಲೂ ಸಾಮಾನ್ಯ ವರ್ಗಕ್ಕೆ ಮೀಸಲಿದ್ದಾಗಲೂ ನಾಯಕ ಸಮುದಾಯವೇ ಹೆಚ್ಚು ಗೆಲವು ಸಾಧಿಸಿತ್ತು. ಈಗ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು ನಾಯಕರ ಪಾರುಪತ್ಯ ಮುಂದುವರಿದಿದೆ.
Related Articles
ಬೆಂಬಲಿಸುವಂತೆ ಕೋರುತ್ತಿದ್ದಾರೆ. ಕ್ಷೇತ್ರದ ಜನರಿಗೆ ಹೊಸ ಮುಖವಾಗಿದ್ದು ಸ್ಥಳೀಯರಲ್ಲ ಎನ್ನುವ ಟೀಕೆ ಎದುರಿಸುತ್ತಿದ್ದಾರೆ. ರಾಜಕೀಯ ಅನುಭವದ ಕೊರತೆ, ಮೋದಿ ಅಲೆ ಮೆಟ್ಟಿ ನಿಲ್ಲುವ ಸವಾಲು ಎದುರಿಸುತ್ತಿದ್ದಾರೆ.
Advertisement
ತಣ್ಣಗಾದ ಬಂಡಾಯ: ಬಿಜೆಪಿ, ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿತ್ತು. ಮಾಜಿ ಸಂಸದ ಬಿ.ವಿ. ನಾಯಕ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಸಾರಿದ್ದು ಬಿಜೆಪಿ ವರಿಷ್ಠರ ಮನವೊಲಿಕೆ ಬಳಿಕ ಬಂಡಾಯ ಶಮನಗೊಂಡಿದೆ. ಕಾಂಗ್ರೆಸ್‌ನಲ್ಲಿ ಬಣ ರಾಜಕೀಯವಿದೆ.
ಜಾತಿವಾರು ಲೆಕ್ಕಾಚಾರ:ಕ್ಷೇತ್ರದಲ್ಲಿ ಒಟ್ಟು 20,10,103 ಲಕ್ಷ ಮತದಾರರಿದ್ದು ಅದರಲ್ಲಿ 10.15,158 ಲಕ್ಷ ಮಹಿಳಾ ಮತದಾರರಿದ್ದರೆ, 9,94,646 ಲಕ್ಷ ಪುರುಷ ಮತದಾರರಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅನಂತರದ ಸ್ಥಾನದಲ್ಲಿ ಅಲ್ಪಸಂಖ್ಯಾಕರು, ಕುರುಬ, ಲಿಂಗಾಯತ ಹಾಗೂ ಇತರ ಸಮುದಾಯದವರಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಯಕ(ವಾಲ್ಮೀಕಿ) ಸಮುದಾಯದ ಮತ ಅದೇ ಸಮುದಾಯಕ್ಕೆ ಸೇರಿದ ಇಬ್ಬರು ಅಭ್ಯರ್ಥಿಗಳ ಮಧ್ಯೆ ವಿಭಜನೆಯಾಗುವ ಸಾಧ್ಯತೆಯಿದ್ದು ಕುರುಬ-ಅಲ್ಪಸಂಖ್ಯಾಕ ಮತಗಳು ಒಂದೆಡೆ ವಾಲಿದರೆ, ಲಿಂಗಾಯತರು ನಿರ್ಣಾಯಕವಾಗಲಿದ್ದಾರೆ.
*ಸಾಮರ್ಥ್ಯ
1)ಪ್ರಧಾನಿ ಮೋದಿ ನಾಮ ಬಲ, ಜೆಡಿಎಸ್ ಬೆಂಬಲ 2)ಐದು ವರ್ಷದಲ್ಲಿ ತಾವು ಮಾಡಿದ ಅಭಿವೃದ್ಧಿ 3)ಸಜ್ಜನ ರಾಜಕಾರಣಿ, ಸ್ಥಳೀಯರು ಎಂಬ ವಿಶೇಷತೆ ನನಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದು ಐದು ವರ್ಷದಲ್ಲಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದಿದ್ದೇನೆ. ಪ್ರಧಾನಿ ಮೋದಿ ಶಕ್ತಿ, ನನ್ನ ಅಭಿವೃದ್ಧಿಯೇ ಶ್ರೀರಕ್ಷೆಯಾಗಿವೆ. ದೇಶದ ಜನತೆಗೆ ಮತ್ತೂಮ್ಮೆ ಮೋದಿಗೆ ಅಧಿಕಾರ ಸಿಗಬೇಕೆಂಬ ಬಯಕೆಯಿದ್ದು, ಜನ ಆಶೀರ್ವದಿಸುವ ವಿಶ್ವಾಸವಿದೆ.
● ರಾಜಾ ಅಮರೇಶ್ವರ ನಾಯಕ, ಬಿಜೆಪಿ ಅಭ್ಯರ್ಥಿ ಜಿ.ಕುಮಾರ ನಾಯಕ ಕಾಂಗ್ರೆಸ್ ಅಭ್ಯರ್ಥಿ
*ಸಾಮರ್ಥ್ಯ
1)ರಾಜ್ಯ ಸರಕಾರದ ಗ್ಯಾರಂಟಿಗಳ ಬಲ
2)ಡಿಸಿಯಾಗಿ ಜಿಲ್ಲೆಯಲ್ಲಿ ಕೆಲಸ ಮಾಡಿದ ಅನುಭವ
3)5 ಕಾಂಗ್ರೆಸ್ ಶಾಸಕರು, 3 ಸಚಿವರ ಬಲ ರಾಯಚೂರು ಜಿಲ್ಲೆಯಲ್ಲಿ ಹಿಂದೆ ಡಿಸಿಯಾಗಿ, ಉಸ್ತುವಾರಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವವಿದೆ. ನನ್ನ 35 ವರ್ಷಗಳ ಆಡಳಿತದ ಅನುಭವದಿಂದ ಜನರಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದೇನೆ. ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ಜನರನ್ನು ತಲುಪಿದ್ದು ಹೋದಲೆಲ್ಲ ಉತ್ತಮ ಬೆಂಬಲ ಸಿಗುತ್ತಿದೆ. ಜನ ಕಾಂಗ್ರೆಸ್ ಗೆಲ್ಲಿಸುವ ಭರವಸೆ ಇದೆ.
● ಜಿ.ಕುಮಾರ ನಾಯಕ, ಕಾಂಗ್ರೆಸ್ ಅಭ್ಯರ್ಥಿ *ಸಿದ್ಧಯ್ಯ ಸ್ವಾಮಿ ಕುಕನೂರು