Advertisement

ಗ್ರಾಮ ವಾಸ್ತವ್ಯದಲ್ಲಿ ಮನವಿಗಳ ಮಹಾಪೂರ

05:42 PM Feb 21, 2021 | Team Udayavani |

ಲಿಂಗಸುಗೂರು: ಡಿಸಿ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ಕಳ್ಳಿಲಿಂಗಸುಗೂರು ಗ್ರಾಮದಲ್ಲಿ ಉತ್ತಮ  ಸ್ಪಂದನೆ ದೊರೆತಿದೆ. ಪ್ರಥಮ ಬಾರಿಗೆ ಕಳ್ಳಿಲಿಂಗಸುಗೂರಿಗೆ ಆಗಮಿಸಿದ ಅಪರ ಜಿಲ್ಲಾಧಿ ಕಾರಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬದಲು ಅಪರ ಜಿಲ್ಲಾಧಿಕಾರಿ ಎಸ್‌.ದುರಗೇಶ ಜೊತೆ ಜಿಲ್ಲಾಮಟ್ಟದ ಅ ಧಿಕಾರಿಗಳು ಭಾಗವಹಿಸಿದ್ದರು. ಗ್ರಾಮಸ್ಥರು ಗ್ರಾಮದ ಬಸ್‌ ತಂಗುದಾಣದಿಂದ ಅಪರ ಜಿಲ್ಲಾ  ಧಿಕಾರಿಗಳನ್ನು ಕುಂಭ ಹೊತ್ತ ಮಹಿಳೆಯರು, ಶಾಲಾ ಮಕ್ಕಳು ಪುಷ್ಟಾರ್ಚನೆ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ ಡೊಳ್ಳು-ಭಾಜಾ ಭಜಂತ್ರಿಯೊಂದಿಗೆ ನಾಗಲಿಂಗೇಶ್ವರ ಮಠದ ಆವರಣದವರಿಗೆ ಮೆರವಣಿಗೆ ಮೂಲಕ ಕರೆ ತರಲಾಯಿತು.

ಮನವಿಗಳ ಭರಪೂರ: ಗ್ರಾಮದ ಜನಸಂಖ್ಯೆಯಲ್ಲಿ 504 ಜನ ಪರಿಶಿಷ್ಟ ಜಾತಿಯವರು ಇದ್ದಾರೆ. ಇದರಲ್ಲಿ ಕೆಲವರಿಗೆ ಭೂಮಿಯೇ ಇಲ್ಲ. ಇದರಿಂದ ಜೀವನ ನಿರ್ವಹಣೆಗೆ ಕಷ್ಟಪಡುವಂತಾಗಿದೆ. ಸರ್ಕಾರಿ ಭೂಮಿ ಗುರುತಿಸಿ ನಮಗೆ ಭೂಮಿ ಒದಗಿಸಬೇಕು. ಕೆಂಚಮ್ಮ ದೇವಿ ದೇವಸ್ಥಾನ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಶವ ಸಂಸ್ಕಾರಕ್ಕಾಗಿ ರುದ್ರಭೂಮಿ ಮಂಜೂರು ಮಾಡಬೇಕು. ಎಸ್‌ಸಿ ಜನರಿಗೆ ಗುಂಪು ಮನೆಗಳನ್ನು ನಿರ್ಮಾಣ ಮಾಡಬೇಕು. ಜಮೀನು ಖಾತೆಗೆ ಅರ್ಜಿ ಸಲ್ಲಿಸಿ 8-10 ತಿಂಗಳು ಕಳೆದರೂ ಇನ್ನೂ ಖಾತೆ ವರ್ಗಾವಣೆ ಆಗುತ್ತಿಲ್ಲ. ಈ ಸಮಸ್ಯೆ ಪರಿಹರಿಸಬೇಕು ಗ್ರಾಮದ ಹುಸೇನಪ್ಪ, ಯಮನಮ್ಮ, ಭೀಮವ್ವ ಅವರು ಅಹವಾಲು ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next