Advertisement

ವಿಮಾನ ಹಾರಾಟ ಮೊದಲೇ ಹೆಸರಿಗೆ ಕಿತ್ತಾಟ

08:02 PM Jun 19, 2021 | Team Udayavani |

ರಾಯಚೂರು: ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದರೂ ಎನ್ನುವಂತಾಗಿದೆ ಜಿಲ್ಲೆಯ ಉದ್ದೇಶಿತ ವಿಮಾನ ನಿಲ್ದಾಣದ ಸ್ಥಿತಿ. ಏರ್‌ಪೋರ್ಟ್‌ಗೆ ಸಂಬಂಧಿ ಸಿದ ಪ್ರಕ್ರಿಯೆ ಶುರುವಾಗಿದ್ದರೂ ಸರ್ಕಾರ ಇನ್ನೂ ಅಧಿಕೃತ ಆದೇಶವೇ ಹೊರಡಿಸಿಲ್ಲ. ಆದರೆ, ಆಗಲೇ ಹೆಸರಿಗಾಗಿ ಕಿತ್ತಾಟ ಶುರುವಾಗಿದೆ. ರಾಯಚೂರು-ಹೈದರಾಬಾದ್‌ ಮುಖ್ಯರಸ್ತೆ ಹೊಂದಿಕೊಂಡಂತೆ ಏಗನೂರು ಸಮೀಪ ಏರ್‌ಪೋರ್ಟ್‌ ನಿರ್ಮಾಣ ಪ್ರಕ್ರಿಯೆಗೆ ಈಗ ರೆಕ್ಕೆ ಪುಕ್ಕ ಮೂಡಿವೆ.

Advertisement

ಅಷ್ಟರಲ್ಲೇ ನಗರಸಭೆ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರ ಒತ್ತಾಸೆ ಮೇರೆಗೆ ವಿಮಾನ ನಿಲ್ದಾಣಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಹೆಸರಿಡಲು ಅನುಮೋದನೆ ಪಡೆಯಲಾಗಿದೆ. ಆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ; ಎಲ್ಲೆಡೆ ಪರ-ವಿರೋಧ ಹೆಚ್ಚಾಗುತ್ತಿದೆ. ನಗರಸಭೆಯ ನಿರ್ಣಯವೇ ಅಂತಿಮವಲ್ಲ.

ಆದರೆ, ಅಲ್ಲಿ ಕೈಗೊಂಡ ನಿರ್ಣಯದಿಂದ ಗೊಂದಲ ಸೃಷ್ಟಿಯಾಗಿರುವುದಂತೂ ಸುಳ್ಳಲ್ಲ. ಇದು ದೇಶದ ಪ್ರಥಮ ಪ್ರಧಾನಿ ನೆಹರು ಸ್ಮರಣಾರ್ಥ ನಿರ್ಮಿಸುತ್ತಿರುವ ವಿಮಾನ ನಿಲ್ದಾಣ. ಹೀಗಾಗಿ ಅವರ ಹೆಸರೇ ಸೂಕ್ತ ಎಂದು ಕೆಲವರು, ಸಂಗೊಳ್ಳಿ ರಾಯಣ್ಣನ ಹೆಸರಿಡಬೇಕು ಎಂದು ಕೆಲವರು, ಏಗನೂರು ಕಂದಾಯ ಗ್ರಾಮ ವ್ಯಾಪ್ತಿಯಲ್ಲೇ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಹೀಗಾಗಿ ದೇವನಹಳ್ಳಿ ಏರ್‌ಪೋರ್ಟ್‌ ರೀತಿ ಏಗನೂರು ಏರ್‌ಪೋರ್ಟ್‌ ಎಂದೇ ಹೆಸರಿಡಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಈ ಪಟ್ಟಿ ಇನ್ನೂ ಹೆಚ್ಚಾದರೂ ಅಚ್ಚರಿ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next