Advertisement

Raibag: ಇಬ್ಬರು ಮಕ್ಕಳು ಮತ್ತು ತಾಯಿಯ ಶವಗಳು ಬಾವಿಯಲ್ಲಿ ಪತ್ತೆ

08:10 PM Jan 17, 2024 | Team Udayavani |

ಬೆಳಗಾವಿ: ಜಿಲ್ಲೆಯ ರಾಯಭಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಇಬ್ಬರು ಮಕ್ಕಳು ಮತ್ತು ತಾಯಿಯ ಶವಗಳು ಬಾವಿಯಲ್ಲಿ ಪತ್ತೆಯಾದ ಪ್ರಕರಣ ಬುಧವಾರ ಬೆಳಕಿಗೆ ಬಂದಿದೆ.

Advertisement

ರಾಯಬಾಗ ತಾಲೂಕು ಸುಲ್ತಾನಪುರದ ಸರಸ್ವತಿ ನಿತಿನ್ ಕಿರವೆ(26) ಮಕ್ಕಳು ದೀಪಿಕಾ(7) ಹಾಗೂ ರೀತಿಕಾ (4) ಅವರ ಶವಗಳು ಬಾವಿಯಲ್ಲಿ ಪತ್ತೆಯಾಗಿವೆ. ಗಂಡನ ಮನೆಯವರ ಕಿರುಕುಳ ತಾಳಲಾರದೆ ಮಾನಸಿಕವಾಗಿ ನೊಂದಿದ್ದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.

ಮಹಾರಾಷ್ಟ್ರದ ಸಾಂಗ್ಲಿ ಪಟ್ಟಣದ ನಿತಿನ್ ಕಿರವೆ ಎಂಬಾತ ನೊಂದಿಗೆ 2016ರಲ್ಲಿ ರಾಯಭಾಗ ತಾಲೂಕು ಸುಲ್ತಾನಪುರ ಗ್ರಾಮದ ಸರಸ್ವತಿಯ ಮದುವೆಯಾಗಿತ್ತು. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next