Advertisement

ಪ್ರಜಾ ಪ್ರಣಾಳಿಕೆ ಚರ್ಚೆಗೆ ರೈ ಚಾಲನೆ

06:44 AM Jan 21, 2019 | Team Udayavani |

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ನಟ ಪ್ರಕಾಶ್‌ ರೈ, ಮತದಾರರೊಂದಿಗೆ “ಪ್ರಜಾ ಪ್ರಣಾಳಿಕೆ ಚರ್ಚೆ’ ಅಭಿಯಾನ ಆರಂಭಿಸಿದ್ದಾರೆ.

Advertisement

ನಗರದ ಎಂ.ಜಿ.ರಸ್ತೆಯ ಗಾಂಧಿ ಉದ್ಯಾನದಲ್ಲಿ ಭಾನುವಾರ ತಮ್ಮ ಅಭಿಮಾನಿಗಳು ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರದ ನಾಗರಿಕರೊಂದಿಗೆ ಅಭಿಯಾನದ ಎಂಟು ಆಟೋಗಳಿಗೆ ಚಾಲನೆ ನೀಡಿದ ಅವರು, ಹತ್ತು ದಿನಗಳ ಕಾಲ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಣಾಳಿಕೆಯ ಕುರಿತು ಚರ್ಚೆ ನಡೆಸಲಿದ್ದು, ಈ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೊಂದು ಆಟೋ ಸಂಚರಿಸಲಿದೆ ಎಂದರು. 

ಕ್ಷೇತ್ರದ ಎಲ್ಲಾ ಭಾಗಗಳಲ್ಲಿ ನಮ್ಮ ತಂಡ ಸದಸ್ಯರು ಸಂಚರಿಸಲಿದ್ದಾರೆ. ನಾಗರಿಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಅವರೊಂದಿಗೆ ಚರ್ಚಿಸಲಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಹೀಗೆ ಸಂಗ್ರಹವಾದ ಅಭಿಪ್ರಾಯಗಳನ್ನು ಆಧರಿಸಿ ಪ್ರಣಾಳಿಕೆ ರೂಪಿಸಲಾಗುವುದು ಎಂದು ಹೇಳಿದರು.

ಪ್ರಾಣಾಳಿಕೆ ಸಿದ್ಧಪಡಿಸಲು ತಜ್ಞರೊಂದಿಗೆ ಕ್ಷೇತ್ರದ ಪ್ರತಿಯೊಬ್ಬ ಮತದಾರರ ನಾಡಿ ಮಿಡಿತವನ್ನೂ ಅರಿಯಬೇಕಿದೆ. ಇದರೊಂದಿಗೆ ದಿನ ನಿತ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಆ ಹಿನ್ನೆಲೆಯಲ್ಲಿ ನೇರವಾಗಿ ಮತದಾರರೊಂದಿಗೆ ಮಾತನಾಡಲಿದ್ದೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next