Advertisement
ಮೀನುಗಾರಿಕೆ, ಬಂದರು ಅಭಿವೃದ್ಧಿ
ಸಹಾಯಧನವನ್ನು ರೂ. 10 ಲಕ್ಷಕ್ಕೆ ಹಾಗೂ ಮತ್ಸ್ಯಾಶ್ರಯ ಯೋಜನೆಯ ಸಹಾಯಧನವನ್ನು 5 ಲಕ್ಷಕ್ಕೆ ಹೆಚ್ಚಿಸಲು
ಪ್ರಯತ್ನಿಸುವುದು. ಪ್ರಧಾನಿ ಮತ್ಸ್ಯ ಸಂಪದ ಯೋಜನೆಯ ಸದುಪಯೋಗಕ್ಕೆ ಶ್ರಮಿಸುವುದು. 1984ರ ಮೀನುಗಾರಿಕಾ ಕಾಯ್ದೆಗೆ ಸೂಕ್ತ ತಿದ್ದುಪಡಿ, ಮೀನುಗಾರಿಕೆಗೆ ಸಂಬಂಧಪಟ್ಟ ಎಲ್ಲಾ ಇನ್ಶೂರೆನ್ಸ್ ಕ್ಲೈಮ್ ಗಳನ್ನು ಕಾಲಮಿತಿಯೊಂದಿಗೆ ಪಾವತಿ ಮಾಡಲು ಕ್ರಮಗಳನ್ನು ಜಾರಿಗೊಳಿಸುವುದು. ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆಗೆ
ಸಂಬಂಧಪಟ್ಟ ಹವಾಮಾನ ಮುನ್ಸೂಚನಾ ಕೇಂದ್ರವನ್ನು ಸ್ಥಾಪಿಸಲು ಪ್ರಯತ್ನ.
Related Articles
500 ಲೀಟರ್ ಡೀಸೆಲ್ ನೀಡಲು ಪ್ರಯತ್ನಿಸುವುದು. ಹೊರ ರಾಜ್ಯದ ಅಕ್ರಮ ಮೀನುಗಾರಿಕೆಯನ್ನು ನಿಷೇಧಿಸಲು ಕ್ರಮ
ಕೈಗೊಳ್ಳಲಾಗುವುದು ಎಂದು ಹೆಗ್ಗಡೆ ಹೇಳಿದರು.
Advertisement
ಪ್ರವಾಸೋದ್ಯಮ ಕ್ಷೇತ್ರಉಭಯ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಅನುಕೂಲವಾಗುವಂತೆ ‘ಪ್ರವಾಸೋದ್ಯಮ ನೀತಿ, ಹೋಂ ಸ್ಟೇಗಳಿಗೆ ಹಾಗೂ ಸಮುದ್ರ
ತೀರದ ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಇಲಾಖೆಗಳಿಂದ ಆಗುತ್ತಿರುವ ಕಾನೂನಿನ ನಿರ್ಬಂಧಗಳನ್ನು ಸರಳೀಕರಣ ದೇವಾಲಯ ಪ್ರವಾಸೋದ್ಯಮ ಅಭಿವೃದ್ಧಿ. ಮಲೆನಾಡಿಗೆ ಪೂರಕವಾಗಿರುವ ಮಿನಿ ಬಸ್ ಸಂಪರ್ಕ ಜಾಲವನ್ನು ವಿಸ್ತರಿಸುವಂತೆ
ಕೆ.ಎಸ್.ಆರ್.ಟಿ.ಸಿ.ಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದು ಎಂದರು. ಅರಣ್ಯ ಕಾಯ್ದೆ ಸರಳೀಕರಣ
ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕನಿಷ್ಠ 10 ಎಕರೆ ಜಮೀನನ್ನು ಗುರುತಿಸಿ ನಿವೇಶನ ರಹಿತರಿಗೆ ನಿವೇಶನಕ್ಕೆ ಕ್ರಮ,
ಪಾರಂಪರಿಕ ಅರಣ್ಯ ಕಾಯ್ದೆಯಡಿ ಭೂ ಮಂಜೂರಾತಿಯ ಕಾಲ” ಮಿತಿಯನ್ನು ಅವಶ್ಯಕ ಪ್ರಸಕ್ತ 75 ವರ್ಷಗಳ ದಾಖಲೆಗಳನ್ನು
25 ವರ್ಷಕ್ಕೆ ಇಳಿಸಿ ಅರಣ್ಯವಾಸಿಗಳಿಗೆ ಬದುಕಲು ಅವಕಾಶ ಮಾಡಿಕೊಡುವುದು, ಅರಣ್ಯ ಕಾಯ್ದೆಯ ಸೆಕ್ಷನ್ 4 ಸರಳೀಕರಣ
ಮಾಡಲಾಗುವುದು ಎಂದರು. ಕೃಷಿ ಹೈನುಗಾರಿಕೆ ಕ್ಷೇತ್ರ
‘ಅಡಿಕೆ ಸಂಶೋಧನ ಕೇಂದ್ರ’ವನ್ನು ಕ್ರಿಯಾಶೀಲಗೊಳಿಸುವುದು, ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ನೇಮಿಸಿದ್ದ ಗೋರಖ್ ಸಿಂಗ್ ವರದಿಯ ಅನುಷ್ಠಾನ, ಎಲೆಚುಕ್ಕಿ ರೋಗದ ಶಾಶ್ವತ ನಿವಾರಣೆಗಾಗಿ ಸಂಶೋಧನೆಗೆ ಅಗತ್ಯ ಕ್ರಮ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆ.ಎಂ.ಎಫ್. ಹಾಲಿನ ಘಟಕ ಸ್ಥಾಪಿಸಿ ಹೈನುಗಾರಿಕೆಗೆ ಉತ್ತೇಜನ, “ನೀರಾ’ ಅನೌಪಚಾರಿಕ ಉದ್ಯೋಗವನ್ನು ಸೃಷ್ಟಿಸಲು ಕೃಷಿ ಕಾರ್ಯಕ್ರಮ. ಮಲೆನಾಡಿನ ಕೃಷಿ ಉತ್ಪನ್ನಗಳಿಗೆ ಜಾಗತಿಕ ಬ್ರ್ಯಾಂಡ್ ನೀಡಲು ಕ್ರಮ, ತರೀಕೆರೆ ತಾಲ್ಲೂಕಿನ ಇತರ ಪ್ರಮುಖ ಬೆಳೆಗಳಾದ ಈರುಳ್ಳಿ ಹಾಗೂ ಇತರ ತರಕಾರಿಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕೋಲ್ಡ್ ಸ್ಟೋರೇಜ್, ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಳಿಗೆ ಪರಿಹಾರ ಮೊತ್ತವನ್ನು ಹೆಚ್ಚಳ, ಮಲೆನಾಡಿನ ಮನೆಗಳನ್ನು ಕ್ರಮಬದ್ಧವಾದ ನಿವೇಶನವೆಂದು ತೀರ್ಮಾನಿಸಿ ನಮೂನೆ 9 ಮತ್ತು 11 ಎ ನೀಡಲು ಪ್ರಯತ್ನಿಸುವುದು. ‘ಮಲೆನಾಡ ದಿನಾಚರಣೆ ಮೂಲಕ ಅಲ್ಲಿನ
ಜನ ಜೀವನ, ಕೃಷಿ, ಪರಂಪರೆ, ಜನಪದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಹಲವು ಕನಸುಗಳು
ಉಡುಪಿ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಉಭಯ ಜಿಲ್ಲೆಗಳಲ್ಲಿ ಸರಕಾರಿ ಎಂಜಿನಿಯರಿಂಗ್ ಕಾಲೇಜು,
ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಸಜ್ಜಿತ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣ, ಕೈಗಾರಿಕೆಗಳಿಗೆ ಸೂಕ್ತ
ಕೈಗಾರಿಕಾ ನಿವೇಶನ ಒದಗಿಸಲು ಕ್ರಮ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಜಾಗದಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಪ್ರಯತ್ನ ಸರಕಾರಿ ಆಸ್ಪತ್ರೆಗಳ ಉನ್ನತೀಕರಣ. ಮಲೆನಾಡು ಭಾಗದಲ್ಲಿ ಕೃಷಿ ಪೂರಕ ಉದ್ಯಮದ ಸ್ಥಾಪನೆಗೆ ವಿಶೇಷ ಕಾರಿಡಾರ್, ಕ್ಷೇತ್ರದಾದ್ಯಂತ 5 ವಿವಿಧ ಸ್ಥಳಗಳಲ್ಲಿ ನೀರಾ ಶುದ್ದೀ ಕರಣ ಘಟಕ/ಸ್ಟೋರೇಜ್ ಕ್ಲಸ್ಟರ್ ಕನಸುಗಳಿವೆ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.