Advertisement

ಶಾಂತಿ ಕಾಪಾಡಲು ರೈ, ಖಾದರ್‌ ಮನವಿ

03:50 AM Jul 11, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ – ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಸರ್ವರೂ ಸಹಕರಿಸಬೇಕು ಹಾಗೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಅವರು ಮನವಿ ಮಾಡಿದ್ದಾರೆ.

Advertisement

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮ ವಾರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿದ ಅವರು, ಕಾನೂನು ಕೈಗೆತ್ತಿಕೊಳ್ಳು ವವರ ವಿರುದ್ಧ ಕಠಿನ ಕ್ರಮಕ್ಕೆ ಪೊಲೀಸ್‌ ಇಲಾಖೆಗೆ ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೋಮುಸಾಮರಸ್ಯ ಉಳಿಸಬೇಕು. ಶಾಂತಿ, ಸೌಹಾರ್ದ ಕದಡುವ ಕೃತ್ಯಕ್ಕೆ ಯಾರೂ ಕೈಹಾಕಬಾರದು ಮತ್ತು ಪ್ರಚೋದನೆ ನೀಡುವ ಕಾರ್ಯ ಮಾಡಬಾರದು ಜಿಲ್ಲಾಧಿ ಕಾರಿಯವರು ಗುರುವಾರ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ಒಳಗೊಂಡು ಶಾಂತಿಸಭೆ ನಡೆಸಲಿದ್ದಾರೆ ಎಂದರು.

ಘರ್ಷಣೆಯಲ್ಲಿ  ಪಾತ್ರವಿಲ್ಲ
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೋಮು ಘರ್ಷಣೆಗಳಿಗೆ ಸಂಬಂಧಪಟ್ಟಂತೆ ಡಿ.ವಿ. ಸದಾನಂದ ಗೌಡ, ಶೋಭಾ ಕರಂದ್ಲಾಜೆ, ಬಿ.ಎಸ್‌. ಯಡಿಯೂರಪ್ಪ ಮುಂತಾದ ಬಿಜೆಪಿ ನಾಯಕರು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ನಮ್ಮ ದಾಗಲಿ, ಕಾಂಗ್ರೆಸ್‌ ಪಕ್ಷ ದ್ದಾಗಲಿ ಯಾವುದೇ ಪಾತ್ರ ವಿಲ್ಲ ಎಂಬು ದಾಗಿ ಸ್ಪಷ್ಟ ಪಡಿಸುತ್ತೇವೆ. ಜಿಲ್ಲೆ ಯಲ್ಲಿ ಯಾವುದೇ ಘಟನೆ ನಡೆದರೂ ಅದಕ್ಕೆ ನಮ್ಮ ಹೆಸರನ್ನು ಎಳೆತರುವುದು ಕೆಲವರ ಚಾಳಿ ಯಾಗಿದೆ. ಕಾಂಗ್ರೆಸ್‌ ಪಕ್ಷ ಜಾತ್ಯತೀತ ಸಿದ್ಧಾಂತದ ಭದ್ರ ಬುನಾದಿಯಲ್ಲಿ ಬೆಳೆದು ಬಂದಿರುವ ಪಕ್ಷ. ಯಾವತ್ತೂ ಸಾಮರಸ್ಯ ಕೆಡಿಸುವ ಪ್ರಯತ್ನ ಮಾಡಿಲ್ಲ ಎರಡು ಮತೀಯ ವಾದಿ ಶಕ್ತಿಗಳು ಜಿಲ್ಲೆಯಲ್ಲಿ ನಡೆಯು ತ್ತಿರುವ ಘರ್ಷಣೆ ಗಳಲ್ಲಿದ್ದಾರೆ. ಇವರ ನಡುವಣ ಮೇಲಾಟಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಸಚಿವರಾದ ರಮಾನಾಥ ರೈ ಹಾಗೂ ಖಾದರ್‌ ಅವರು ಹೇಳಿದರು.

ನಿಯೋಜಿತ ಕೊಲೆಗಳಾಗುತ್ತಿವೆ
ಜಿಲ್ಲೆಯಲ್ಲಿ ನಿಯೋಜಿತ ಹತ್ಯೆಗಳಾಗುತ್ತಿವೆ. ಉದ್ದೇಶಪೂರ್ವಕವಾಗಿ ಇಂತಹ ಕೃತ್ಯ ಗಳು ನಡೆಯುತ್ತಿವೆ. ಕೊಲೆ ಗಾರರ ಜತೆಗೆ ಇದರ ಹಿಂದಿರುವ ಪಿತೂರಿದಾರ ರಿಗೂ ಶಿಕ್ಷೆ ಯಾಗ ಬೇಕು. ಈ ಬಗ್ಗೆ ಮುಖ್ಯಮಂತ್ರಿಯವರಿಗೂ ಮನವಿ ಮಾಡಲಾಗಿದೆ ಎಂದು ಸಚಿವ ರೈ ಹೇಳಿದರು.

Advertisement

ಜಿಲ್ಲೆಯಲ್ಲಿ 144 ಸೆಕ್ಷನ್‌ ಪ್ರಕಾರ ನಿಷೇಧಾಜ್ಞೆ ಇದ್ದರೂ ಅದನ್ನು ಉಲ್ಲಂಘಿಸಿ ಸಭೆ, ಮೆರವಣಿಗೆಗಳನ್ನು ಮಾಡಲಾಗಿದೆ. ಕಾಂಗ್ರೆಸ್‌ ಪಕ್ಷದ ಯುವ ಮುಖಂಡ ಜಲೀಲ್‌ ಕರೋ ಪಾಡಿ ಅವರ ಹತ್ಯೆಯಾದಾಗ ಕಾಂಗ್ರೆಸ್‌ ಅವರ ಪಾರ್ಥಿವ ಶರೀರದ ಮೆರವಣಿಗೆ ಮಾಡಲಿಲ್ಲ. ಯಾರಿಂದಲೂ ಕಾನೂನು ಮುರಿಯುವ ಕಾರ್ಯ ಆಗಬಾರದು. ಅಂತಹವರ ವಿರುದ್ಧ ಕಠಿನ ಕ್ರಮಗಳು ಆಗಬೇಕು. ಕಾನೂನು ಮುರಿ ದವರ ವಿರುದ್ಧ ಕೇಸು ಹಾಕಲಾಗುತ್ತಿದೆ ಎಂದು ಸಚಿವ ರೈ ಹೇಳಿದರು.

ಸಚಿವ ಖಾದರ್‌ ಅವರು ಮಾತನಾಡಿ, ಜವಾಬ್ದಾರಿ ಸ್ಥಾನದಲ್ಲಿರುವವರು ಬೇಜವಾ ಬ್ದಾರಿ ಹೇಳಿಕೆಗಳನ್ನು ನೀಡುವುದು ಖಂಡ ನೀಯ. ಬಿಜೆಪಿಯ ಕೆಲವು ನಾಯಕರು ಅವರ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಾವಿನ ಮನೆಯಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು ಎಂದರು. ಶರತ್‌ ಅವರನ್ನು ಆಸ್ಪತ್ರೆಗೆ ಕೊಂಡೊಯ್ದ ರವೂಫ್‌ ಹಾಗೂ ಮೆರವಣಿಗೆ ಸಂದರ್ಭದಲ್ಲಿ ಹಲ್ಲೆಯಿಂದ ಗಾಯಗೊಂಡಿದ್ದ ರಿಯಾಜ್‌ ಅವರಿಗೆ ಚಿಕಿತ್ಸೆ ಕೊಡಿಸಿದ ಹಿಂದೂ ಯುವಕನನ್ನು ಕಾಂಗ್ರೆಸ್‌ ವತಿಯಿಂದ ಗೌರವಿಸಲಾಗುವುದು ಎಂದವರು ಹೇಳಿದರು.

ಡಿ.ವಿ., ಶೋಭಾ ಸ್ಪರ್ಧೆ ಮಾಡಲಿ
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ನನ್ನ ಬಂಟ್ವಾಳ ಕ್ಷೇತ್ರದಲ್ಲಿ ಅಥವಾ ಸಚಿವ ಯು.ಟಿ. ಖಾದರ್‌ ಅವರ ಮಂಗಳೂರು ಕ್ಷೇತ್ರದಲ್ಲಿ ನಮ್ಮ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿ. ಕೋಮುವಾದ ಗೆಲ್ಲುತ್ತೂ… ಸಾಮರಸ್ಯಕ್ಕೆ ಜಯವಾಗುತ್ತದೋ ಎಂದು ನೋಡೋಣ. ನಮ್ಮ ಈ ಸವಾಲನ್ನು ಅವರು ಸ್ವೀಕರಿಸಲಿ ಎಂದು ಸಚಿವ ರಮಾನಾಥ ರೈ ಹೇಳಿದರು.

ಶರತ್‌, ಅಶ್ರಫ್‌ ಕುಟುಂಬಕ್ಕೆ  ಪರಿಹಾರ
ಇತ್ತೀಚೆಗೆ ಹತ್ಯೆಯಾದ ಅಶ್ರಫ್‌ ಹಾಗೂ ಶರತ್‌ ಅವರು ಅಮಾಯಕರು. ಯಾವುದೇ ಪ್ರಕರಣಗಳಲ್ಲಿ ಭಾಗಿಯಾದವರಲ್ಲ. ಅವರ ಕುಟುಂಬಗಳಿಗೆ ಸರಕಾರದ ವತಿಯಿಂದ ಪರಿಹಾರ ನೀಡಲಾಗುವುದು. ಹಲ್ಲೆಗಳಲ್ಲಿ ಗಾಯಗೊಳಗಾದವರ ಚಿಕಿತ್ಸೆಯ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಖಾದರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next