Advertisement

2024 LS Polls; ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ: ಅಜಯ್ ರಾಯ್

06:44 PM Aug 18, 2023 | Team Udayavani |

ವಾರಾಣಸಿ : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದ ರಾಹುಲ್ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಶುಕ್ರವಾರ ಹೇಳಿದ್ದಾರೆ.

Advertisement

“ರಾಹುಲ್ ಗಾಂಧಿ ಅವರು ಖಂಡಿತವಾಗಿಯೂ ಅಮೇಥಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ, ಅಮೇಥಿಯ ಜನರು ಇಲ್ಲಿದ್ದಾರೆ” ಎಂದು ಇತ್ತೀಚಿನ ಪುನರ್ ರಚನೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ರಾಯ್ ವಾರಾಣಸಿಯಲ್ಲಿ ಸುದ್ದಿಗಾರರಿಗೆ ಹೇಳಿಕೆ ನೀಡಿದ್ದಾರೆ.

2004 ರಿಂದ ಸಂಸದರಾಗಿದ್ದ ರಾಹುಲ್ ಗಾಂಧಿ ಅವರನ್ನು 2019 ರ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರು ಸೋಲುಣಿಸುವವರೆಗೆ ಅಮೇಥಿ ಗಾಂಧಿ ಕುಟುಂಬದ ದೀರ್ಘಕಾಲದ ಭದ್ರಕೋಟೆಯಾಗಿತ್ತು.

”ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಯಸಿದರೆ ವಾರಾಣಸಿ ಅಥವಾ ಇನ್ನಾವುದೇ ಸ್ಥಳದಿಂದ ಸ್ಪರ್ಧಿಸಬಹುದು. ಅವರಿಗೆ ವಾರಾಣಸಿಯಿಂದ ಹೋರಾಡುವ ಇಚ್ಛೆ ಇದ್ದರೆ, ಪ್ರತಿಯೊಬ್ಬ ಕಾರ್ಯಕರ್ತನೂ ಆಕೆಗಾಗಿ ಹೃದಯಪೂರ್ವಕವಾಗಿ ಕೆಲಸ ಮಾಡುತ್ತಾನೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next