Advertisement

ಕೆಟ್ಟ ವಿದೇಶಾಂಗ ನೀತಿಯಿಂದ ಚೀನ, ಪಾಕ್‌ ಹತ್ತಿರ

12:17 AM Feb 03, 2022 | Team Udayavani |

ಹೊಸದಿಲ್ಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರಕಾರದ ತಪ್ಪು ವಿದೇಶಾಂಗ ನೀತಿಗಳಿಂದಾಗಿ ಭಾರತ ಇಂದು ಏಕಾಂಗಿ ರಾಷ್ಟ್ರವಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

Advertisement

ಲೋಕಸಭೆಯಲ್ಲಿ ಬುಧವಾರ ನಡೆದ ರಾಷ್ಟ್ರ ಪತಿ ಭಾಷ ಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಭಾರತದ ನೈಜ ವಿದೇಶಾಂಗ ನೀತಿ, ನೆರೆಯ ರಾಷ್ಟ್ರಗಳಾದ ಚೀನ ಹಾಗೂ ಪಾಕಿಸ್ಥಾನವನ್ನು ಜತೆಯಲ್ಲಿಟ್ಟುಕೊಂಡು ಮುಂದೆ ಹೋಗುವ ಆಶಯವನ್ನು ಹೊಂದಿದೆ. ಇದರ ನಿಜವಾದ ಅರ್ಥ, ಚೀನ ಹಾಗೂ ಪಾಕಿಸ್ಥಾನವನ್ನು ಅವುಗಳಿಗೆ ಅರಿವಿಲ್ಲದಂತೆ ದೂರವಿಡುವುದೇ ಆಗಿತ್ತು. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನೀವು (ಎನ್‌ಡಿಎ ಸರಕಾರ) ಈ ಆಶಯವನ್ನು ನಿರ್ಲಕ್ಷಿಸಿದಿರಿ. ಇದರ ಫ‌ಲವಾಗಿ, ಇಂದು ಪಾಕಿಸ್ಥಾನ ಹಾಗೂ ಚೀನ ರಾಷ್ಟ್ರಗಳು ಹಿಂದೆಂದಿಗಿಂತಲೂ ಗಾಢ ಸ್ನೇಹ ಹೊಂದಲು ಕಾರಣವಾಗಿ, ಭಾರತದ ವಿರುದ್ಧ ಒಟ್ಟಿಗೆ ಕತ್ತಿ ಮಸೆಯಲಾರಂಭಿಸಿವೆ’ ಎಂದು ಟೀಕಿಸಿದರು.

ಗಣರಾಜ್ಯೋತ್ಸವಕ್ಕೆ ಏಕೆ ಯಾವ ಅತಿಥಿ ಇಲ್ಲ?: “”ನಿಮ್ಮ ಅವಸರದ ವಿದೇಶಾಂಗ ನೀತಿಗಳಿಂದಾಗಿ ಪಾಕಿಸ್ಥಾನ ಹಾಗೂ ಚೀನವನ್ನು ಹತ್ತಿರಕ್ಕೆ ತಂದಿದ್ದೀರಿ. ನಿಜಕ್ಕೂ ಇದೊಂದು ದೊಡ್ಡ ಪ್ರಮಾಣ. ಅಷ್ಟೇ ಅಲ್ಲ, ನಿಮ್ಮ ವಿದೇಶಾಂಗ ನೀತಿಯಲ್ಲಿ ಮಾಡಿಕೊಂಡ ಬದಲಾವಣೆಗಳಿಂದ ಭಾರತ ಇಂದು ಏಕಾಂಗಿ ರಾಷ್ಟ್ರವಾಗಿದೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಯಾವುದೇ ಒಬ್ಬ ವಿದೇಶಿ ಗಣ್ಯರು ಅತಿಥಿಯಾಗಿ ಯಾಕೆ ಬರಲಿಲ್ಲ ಎಂಬುದನ್ನು ನಿಮ್ಮ ಆತ್ಮಸಾಕ್ಷಿಗೆ ಕೇಳಿಕೊಳ್ಳಿ. ನಮ್ಮ ಸುತ್ತಲೂ ಇರುವ ಬರ್ಮಾ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಪಾಕಿಸ್ಥಾನ‌, ಚೀನ ಇವೆ. ಇವುಗಳಲ್ಲಿ ಅನೇಕ ರಾಷ್ಟ್ರಗಳು ಭಾರತದ ವಿರೋಧಿ ಮನಃಸ್ಥಿತಿಯಲ್ಲಿವೆ. ಉದ್ದೇಶ ಪೂರ್ವಕವಾಗಿಯೇ ಆ ಎಲ್ಲ ರಾಷ್ಟ್ರಗಳು ನಮ್ಮನ್ನು ಏಕಾಂಗಿಯಾಗಿಸಿವೆ ಎಂದು ರಾಹುಲ್‌ ಹೇಳಿದರು.

ಇದನ್ನೂ ಓದಿ:ವಿಂಟರ್‌ ಒಲಿಂಪಿಕ್ಸ್‌: ಭಾರತದ ಪಾಳೆಯದಲ್ಲಿ ಕೋವಿಡ್ ಪಾಸಿಟಿವ್‌ ಕೇಸ್‌ ಪತ್ತೆ

ಎರಡು ಭಾರತ: ಭಾರತದಲ್ಲೀಗ ಎರಡು ಭಾರತ ಇವೆ. ಒಂದು ಭಾರತ – ಕುಬೇರರದ್ದು. ಮತ್ತೂಂದು ಕಡು ಬಡವರದ್ದು. ಯುಪಿಎ ಸರಕಾರ, ತನ್ನ 10 ವರ್ಷಗಳ ಆಡಳಿತದಲ್ಲಿ 27 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದೆ. ಇದನ್ನು ನಾವು ಹೇಳುತ್ತಿಲ್ಲ. ಸರಕಾರದ ಅಂಕಿ-ಅಂಶಗಳೇ ಹೇಳುತ್ತಿವೆ. ಆದರೆ ಎನ್‌ಡಿಎ ಸರಕಾರದ ಕಳೆದ ಏಳು ವರ್ಷಗಳ ಅವಧಿಯಲ್ಲಿ 23 ಕೋಟಿ ಜನರು ಬಡತನದ ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ ಎಂದು ರಾಹುಲ್‌ ಗಾಂಧಿ ವಿಷಾದಿಸಿದರು.

Advertisement

ಗೊಂದಲದಲ್ಲಿ ರಾಹುಲ್‌
ರಾಹುಲ್‌ ಗಾಂಧಿ ಒಬ್ಬ ಗೊಂದಲಮಯ ಹಾಗೂ ಅವಿವೇಕಿ ನಾಯಕ. ಭಾರತ ಈಗ ದೇಶವಾಗಿ ಉಳಿದಿಲ್ಲ. ಚೀನದ ಗುರಿಗಳು ಸ್ಪಷ್ಟವಾಗಿವೆ ಎಂದು ಅವರು ಹೇಳುತ್ತಾರೆ. ಇದನ್ನು ಹೇಳಲೆಂದು ಅವರು ಸಂಸತ್ತಿಗೆ ಬಂದಿದ್ದಾ? ಟಿಬೆಟ್‌ ಸಮಸ್ಯೆ ಸೃಷ್ಟಿಯಾಗಿದ್ದು ಕಾಂಗ್ರೆಸಿನಿಂದ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದರು. ರಾಹುಲ್‌ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವ ಜೈಶಂಕರ್‌, “ಕೊರೊನಾ 3ನೇ ಅಲೆ ಇದ್ದಿದ್ದರಿಂದ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಯಾವುದೇ ಅತಿಥಿಗಳನ್ನು ಆಹ್ವಾನಿಸಿರಲಿಲ್ಲ. ಇದು ಭಾರತದಲ್ಲಿ ಇರುವ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next