Advertisement

ವಯನಾಡ್‌ : ಗುರುವಾರ ಬೆಳಗ್ಗೆ 11 ಗಂಟೆಗೆ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ

09:06 AM Apr 04, 2019 | Sathish malya |

ಕೋಯಿಕ್ಕೋಡ್‌, ಕೇರಳ : ತನ್ನ ಸಾಂಪ್ರದಾಯಿಕ ಭದ್ರಕೋಟೆಯಾಗಿರುವ ಅಮೇಠಿಯಿಂದ ಸ್ಪರ್ಧಿಸುವುದರ ಜತೆಗೆ ವಯನಾಡ್‌ ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ನಾಳೆ ಗುರುವಾರ ಎ.4ರಂದು ಬೆಳಗ್ಗೆ 11 ಗಂಟೆಗೆ ವಯನಾಡ್‌ ನಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

Advertisement

ಈ ವಿಷಯವನ್ನು ಇಂದಿಲ್ಲಿ ಪಕ್ಷದ ಹಿರಿಯ ನಾಯಕ ರಮೇಶ್‌ ಚೆನ್ನಿತ್ತಲ ಅವರು ಮಾಧ್ಯಮಕ್ಕೆ ತಿಳಿಸಿದರು.

ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೂಡ ರಾಹುಲ್‌ ಅವರ ಜತೆಗೆ ನಾಮಪತ್ರ ಸಲ್ಲಿಸುವಾಗ ಇರುತ್ತಾರೆ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಮತ್ತು ಎಐಸಿಸಿ ಪ್ರದಾನಿ ಕಾರ್ಯದರ್ಶಿ (ಕೇರಳ ಪ್ರಭಾರಿ) ಮುಕುಲ್‌ ವಾಸ್ನಿಕ್‌ ಹೇಳಿದರು.

ರಾಹುಲ್‌ ಅವರ ಉಮೇದುವಾರಿಕೆಯಿಂದ ವಯನಾಡ್‌ ಕ್ಷೇತ್ರದ ಜನರಲ್ಲಿ ಸಂಭ್ರಮೋಲ್ಲಾಸ ತುಂಬಿದೆ ಎಂದು ವಾಸ್ನಿಕ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next