Advertisement

ರಾಹುಲ್‌ಗೆ ಶೀಘ್ರವೇ ಯುಪಿಎ ಮುಖ್ಯಸ್ಥ ಸ್ಥಾನ

06:45 AM Dec 20, 2017 | Team Udayavani |

ನವದೆಹಲಿ: ಕಾಂಗ್ರೆಸ್‌ನ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಆಯ್ಕೆಯಾದ ಬೆನ್ನಲ್ಲೇ ಅವರಿಗಾಗಿ ಯುಪಿಎ ಮೈತ್ರಿಕೂಟದ ಅಧ್ಯಕ್ಷ ಸ್ಥಾನ ಕಾಯುತ್ತಿದೆ.

Advertisement

ಮುಂದಿನ ವರ್ಷ ಕರ್ನಾಟಕ ಸೇರಿ ಎಂಟು ರಾಜ್ಯಗಳ ಚುನಾವಣೆ ಇರುವ ಹಿನ್ನೆಲೆಯಲ್ಲಿ ಹಾಲಿ ಇರುವ ಯುಪಿಎ ಮೈತ್ರಿಕೂಟ ಬಲಪಡಿಸಲು ಮತ್ತು ಅದಕ್ಕೆ ಹೆಚ್ಚುವರಿ ಪಕ್ಷಗಳನ್ನು ಸೇರ್ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ರಾಹುಲ್‌ಗೆ ಸವಾಲಾಗಿದೆ. ಮಿತ್ರಪಕ್ಷಗಳ ನಾಯಕರು ಸೋನಿಯಾ ಬದಲಾಗಿ ರಾಹುಲ್‌ ಜತೆಗೇ ಮಾತುಕತೆ ನಡೆಸಬೇಕಾಗುತ್ತದೆ.

ರಾಹುಲ್‌ಗೆ ಮೊತ್ತ ಮೊದಲ ಸವಾಲಿನ ಕೆಲಸವೆಂದರೆ ಮಹಾರಾಷ್ಟ್ರದಲ್ಲಿ ಯುಪಿಎಯಿಂದ ದೂರ ಸರಿದಿರುವ ಎನ್‌ಸಿಪಿಯನ್ನು ಮತ್ತೆ ಮೈತ್ರಿಕೂಟಕ್ಕೆ ತರುವುದು. ಆಗಸ್ಟ್‌ ನಲ್ಲಿ ಗುಜರಾತ್‌ನಿಂದ ರಾಜ್ಯಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ಅಹ್ಮದ್‌ ಪಟೇಲ್‌ ವಿರುದ್ಧ ಮತ ಹಾಕಿದ್ದಕ್ಕೆ ರಾಹುಲ್‌ ಅತೃಪ್ತಿಗೊಂಡಿದ್ದಾರೆ. ಮಿತ್ರ ಪಕ್ಷಗಳನ್ನು ಆಯ್ಕೆ ಮಾಡುವಲ್ಲಿ ಪ್ರಧಾನಿ ಮೋದಿಗೆ ಇರುವ  ಚಾಕಚಕ್ಯತೆಯನ್ನು ರಾಹುಲ್‌ ಬೆಳೆಸಿಕೊಳ್ಳಬೇಕು ಎಂದು ಹಿರಿಯ ನಾಯಕರೊಬ್ಬರು ಪ್ರತಿಪಾದಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next