Advertisement
ಜನವರಿಯಲ್ಲಿ ಹೈದರಾಬಾದ್‌ನಲ್ಲಿ ನಡೆದ ಸರಣಿ ಆರಂಭ ಪಂದ್ಯದ ನಂತರ ರಾಹುಲ್ ಅವರು ಬಲ ತೊಡೆಯ ನೋವಿನಿಂದ ಅಲಭ್ಯರಾಗಿದ್ದರು. ಆದರೆ ಬಿಸಿಸಿಐ ಪ್ರಕಾರ, ಈ ತಿಂಗಳ ಆರಂಭದಲ್ಲಿ ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್‌ಗೆ ಮೊದಲು ಅವರು 90 ಪ್ರತಿಶತದಷ್ಟು ಫಿಟ್ ಆಗಿದ್ದರು.
Related Articles
Advertisement
ಟೆಸ್ಟ್ ಸರಣಯಲ್ಲಿ ರಾಹುಲ್ ಜಾಗದಲ್ಲಿ ರಜತ್ ಪಾಟಿದಾರ್ ತಂಡದಲ್ಲಿದ್ದರು. ಆದರೆ ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 63 ರನ್ ಗಳಿಸಿರುವ ಕಾರಣ ಆಡುವ ಹನ್ನೊಂದರ ಬಳಗದಲ್ಲಿ ಅವರ ಸ್ಥಾನವನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲವಾಗಿದೆ. ಧರ್ಮಶಾಲಾದಲ್ಲಿ ದೇವದತ್ ಪಡಿಕ್ಕಲ್‌ಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ಬುಮ್ರಾ ವಾಪಸ್
ರಾಂಚಿ ಟೆಸ್ಟ್ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಭಾರತದ ಪ್ರೀಮಿಯರ್ ವೇಗಿ ಜಸ್ಪ್ರೀತ್ ಬುಮ್ರಾ ಅವರು ಬೌಲಿಂಗ್ ದಾಳಿಯನ್ನು ಮುನ್ನಡೆಸುವ ನಿರೀಕ್ಷೆಯಿದೆ. ಸರಣಿಯನ್ನು ಗೆದ್ದಾಗಿದೆಯಾದರೂ ರೆ ಪ್ರತಿ ಟೆಸ್ಟ್ ಪಂದ್ಯವು ನಿರ್ಣಾಯಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳನ್ನು ನೀಡುತ್ತದೆ ಮತ್ತು ಧರ್ಮಶಾಲಾದ ತಂಪಾದ ವಾತಾವರಣದಲ್ಲಿ ಬುಮ್ರಾ ದೊಡ್ಡ ಪಾತ್ರವನ್ನು ವಹಿಸುವ ನಿರೀಕ್ಷೆ ಇರಿಸಲಾಗಿದೆ.
ಭಾರತ ಐದು ಗೆಲುವು, ಎರಡು ಸೋಲು ಹಾಗೂ ಒಂದು ಡ್ರಾದೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನ್ಯೂಜಿ ಲ್ಯಾಂಡ್ 75 ಗೆಲುವಿನ ಶೇಕಡಾವಾರು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಅವರು ಕೇವಲ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.