Advertisement

Rahul-Sonia ನಳಪಾಕ: ಬಿಜೆಪಿಗೆ ಜಾಮ್‌ ಆಫ‌ರ್‌!

01:47 AM Jan 01, 2024 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ ಅವರ ಯುಟ್ಯೂಬ್‌ ಚಾನೆಲ್‌ನಲ್ಲಿ 2023ರ ಕೊನೆಯ ವೀಡಿಯೋವೊಂದನ್ನು ಅಪ್‌ಲೋಡ್‌ ಮಾಡಲಾಗಿದೆ. ಅದರಲ್ಲಿ ಬಿಜೆಪಿಗರಿಗೆ ರಾಹುಲ್‌ ಫ‌ೂÅಟ್‌ಜಾಮ್‌ ನೀಡುವುದಾಗಿ ಹೇಳಿದ್ದಾರೆ. ರಾಹುಲ್‌, ಸೋನಿಯಾ ಗಾಂಧಿ ಅವರು ತಮ್ಮ ತೋಟಕ್ಕೆ ತೆರಳಿ ಕಿತ್ತಳೆ ಹಣ್ಣುಗಳನ್ನು ಕೊಯ್ದು ತಂದು, ಅದನ್ನು ಬೇಯಿಸಿ ಜಾಮ್‌ ತಯಾರಿ­ಸಿರು ವುದನ್ನು ವೀಡಿಯೋದಲ್ಲಿ ಕಾಣಬಹು­ದಾಗಿದೆ. ಈ ವೇಳೆ ಅಮ್ಮ-ಮಗ ಪರಸ್ಪರ ಕೆಲವು ವಿನೋದದ ವಿಚಾರ­ಗಳನ್ನೂ ಚರ್ಚಿ­ಸುತ್ತಾ “ಇದು ನನ್ನ ರೆಸಿಪಿ ಅಲ್ಲ. ಸಹೋದರಿ ಪ್ರಿಯಾಂಕಾಳದ್ದು. ನಾನು ಮಾಡುತ್ತಿದ್ದೇನೆ ಅಷ್ಟೇ. ಬಿಜೆಪಿ ಅವರಿಗೆ ಬೇಕಿದ್ದರೂ ಈ ಜಾಮ್‌ ಕೊಡುತ್ತೇನೆ ಏನೆನ್ನುವಿರಿ ಅಮ್ಮಾ’ ಎಂದು ರಾಹುಲ್‌ ಪ್ರಶ್ನಿಸಿದ್ದಾರೆ. ಈ ಮಾತು ಕೇಳಿ ನಕ್ಕ ಸೋನಿಯಾ, “ಬಿಜೆಪಿಗರು ನಮ್ಮತ್ತಲೇ ಇದನ್ನು ಎಸೆ ಯುತ್ತಾರೆ’ ಎಂದಿದ್ದಾರೆ. “ಪರವಾಗಿಲ್ಲ, ನಾವು ಮತ್ತೆ ಎತ್ತಿಕೊಳ್ಳೋಣ’ ಎಂದು ರಾಹುಲ್‌ ತಮಾಷೆ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next