Advertisement
ಯಾಕೇ ಈ ಕ್ರಮಯಾವುದೇ ತಾರಾ ಪ್ರಚಾರಕರ ಸಭೆಯಲ್ಲಿ ಅಭ್ಯರ್ಥಿ ವೇದಿಕೆಯಲ್ಲಿ ಉಪಸ್ಥಿತರಿದ್ದರೆ, ಅವರ ಭಾವ ಚಿತ್ರವನ್ನು ವೇದಿಕೆಯಲ್ಲಿ ಹಾಕಿದ್ದರೆ, ಅಭ್ಯರ್ಥಿ ಪರ ಮತ ಯಾಚಿಸಿದ್ದರೆ ಆಗ ಆ ರ್ಯಾಲಿಯ ಪೂರ್ಣ ವೆಚ್ಚವನ್ನು ಅಭ್ಯರ್ಥಿ ಹೆಸರಿಗೆ ಸೇರಿಸಲಾಗುತ್ತದೆ. ಪೂಜಾರಿಗಳು ಅಂದು ವೇದಿಕೆಯಲ್ಲಿ ಇರಲಿಲ್ಲ. ಆದರೆ ರಾಹುಲ್ ಗಾಂಧಿ ಸಭೆಯ
ವೇದಿಕೆಯಿಂದ ಜನಾರ್ದನ ಪೂಜಾರಿ ಪರ ನಾಯಕರು ಮತ ಯಾಚಿಸಿದ್ದರು. ಅದುದರಿಂದ ಚುನಾವಣಾ ನಿಯಮಗಳ ಪ್ರಕಾರ ವೆಚ್ಚವನ್ನು ಪೂಜಾರಿ ಹೆಸರಿಗೆ ಸೇರಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದರು. ಸಭೆಯಲ್ಲಿ 10,000 ಕುರ್ಚಿಗಳು ಹಾಗೂ 13 ವಿಐಪಿ ಕುರ್ಚಿ ಬಳಸಲಾದ ಕುರಿತು ಹಾಗೂ ಇತರ ಖರ್ಚುಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಖರ್ಚುವೆಚ್ಚಗಳ ಆಗಿನ ಸಹಾಯಕ ವೀಕ್ಷಕ ಕೃಷ್ಣಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಅಂದು ಮಾಹಿತಿ ನೀಡಿದ್ದರು.
ಕಾಸರಗೋಡಿನಲ್ಲಿ ಎ. 8ರಂದು ನಡೆದ ಬಿಜೆಪಿ ನಾಯಕ ನರೇಂದ್ರ ಮೋದಿ ಅವರ ರ್ಯಾಲಿಯ ವೇದಿಕೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಉಪಸ್ಥಿತರಿದ್ದರು. ಇದರ ವೆಚ್ಚವನ್ನು ಅವರ ಖಾತೆಗೆ ಜಮೆ ಮಾಡುವ ಕುರಿತು ವಿವರಣೆ ಕೋರಿ ನೋಟಿಸ್ ನೀಡಲಾಗಿತ್ತು.