Advertisement

ರಾಹುಲ್‌ ಜೀ..ದಲಿತ ಹೆಣ್ಣು ಕೊಡ್ತೀವಿ,ಮದ್ವೆ ಆಗ್ತೀರೋ?

02:14 PM Aug 29, 2017 | |

ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯ ರಾಜಕಾರಣದಲ್ಲಿ  ದಲಿತರ ವಿಚಾರದಲ್ಲಿ ನಡೆಯುವ ಪರ ವಿರೋಧದ ಹೇಳಿಕೆಗಳು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಇದಕ್ಕೆ ಹೊಸ ಸೇರ್ಪಡೆಯಾಗಿ ಬಿಜೆಪಿಯ ದಲಿತ ನಾಯಕ ಗೋವಿಂದ ಕಾರಜೋಳ ಅವರು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಸವಾಲೊಂದನ್ನು ಹಾಕಿದ್ದಾರೆ.

Advertisement

ಮಂಗಳವಾರ ನಡೆದ ಸ್ಲಂ ಮೋರ್ಚಾ ಸಭೆಯಲ್ಲಿ ಮಾತನಾಡಿದ ಕಾರಜೋಳ ‘ರಾಹುಲ್‌ ಗಾಂಧಿ ಅವರಿಗೆ ಹೆಣ್ಣು ಕೊಡಲು ನಮ್ಮ ಸಮಾಜ ಸಿದ್ಧವಿದೆ. ಮದುವೆ ಆಗಲು ಅವರು ತಯಾರಿದ್ದಾರಾ’ ಎಂದು ಸವಾಲು ಹಾಕಿದರು. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಜನಸಂಪರ್ಕ ಅಭಿಯಾನದ ವೇಳೆ ತಮಗೆ ಉಪಾಹಾರ ವ್ಯವಸ್ಥೆ ಮಾಡಿದ್ದ 33 ದಲಿತ ಕುಟುಂಬಗಳ ಸದಸ್ಯರೊಂದಿಗೆ ಸೋಮವಾರ ತಮ್ಮ ನಿವಾಸದಲ್ಲಿ ಸಹಭೋಜನ ಮಾಡಿಸಿದ್ದರು. ಈ ಬಗ್ಗೆ ಟೀಕಿಸಿದ್ದ ಕಾಂಗ್ರೆಸ್‌ ನಾಯಕರಿಗೆ ಕಾರಜೋಳ ತಿರುಗೇಟು ನೀಡಿ ಸಲಾಲು ಹಾಕಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.