Advertisement

ನಾಳೆ ಉಚ್ಚಿಲಕ್ಕೆ ರಾಹುಲ್ ಗಾಂಧಿ: ಕಟಪಾಡಿ –ಉಚ್ಚಿಲದಲ್ಲಿ ರೋಡ್ ಶೋ, ಮೀನುಗಾರರ ಜೊತೆ ಸಂವಾದ

06:28 PM Apr 26, 2023 | Team Udayavani |

ಕಾಪು : ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಗುರುವಾರ ಕಾಪು ಕ್ಷೇತ್ರದ ಉಚ್ಚಿಲಕ್ಕೆ ಆಗಮಿಸಲಿದ್ದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ನಡಯೋ ಮೀನುಗಾರರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

Advertisement

ಕಾಪು ರಾಜೀವ ಭವನದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾಳೆ ಮಧ್ಯಾಹ್ನ 3-40 ಕ್ಕೆ ಕಾಪು ಕ್ಷೇತ್ರಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿಯವರು ಕಟಪಾಡಿಯಲ್ಲಿ ಮತ್ತು ಉಚ್ಚಿಲದಲ್ಲಿ ನಡೆಯುವ ರೋಡ್ ಶೋನಲ್ಲಿ ಭಾಗವಹಿಸಲಿದ್ದು ನಂತರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ‌ ನಡೆಯುವ ಮೀನುಗಾರರ ಜೊತೆ ಸಂವಾದದಲ್ಲಿ ಭಾಗವಹಿಸಿ ಮೀನುಗಾರರ ಸಮುದಾಯದ ಕಷ್ಟ ನಷ್ಟಗಳನ್ನು ಆಲಿಸಲಿದ್ದಾರೆ ಎಂದರು.

ಕಾಪು, ಬೈಂದೂರು, ಕುಂದಾಪುರ, ಉಡುಪಿ, ಮಂಗಳೂರಿನಿಂದ ಸುಮಾರು 2 ಸಾವಿರ ಮೀನುಗಾರರು ಈ ಸಮಾವೇಶ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಮೀನುಗಾರರ ಜೊತೆ ಸಂವಾದ ನಡೆಸೋ ಕಾರ್ಯಕ್ರಮ ಕಾಪು ಕ್ಷೇತ್ರದಲ್ಲಿ ನಡೀತಿದೆ ಎಂದು ಸೊರಕೆ ಹೇಳಿದರು.

ಮೀನುಗಾರರ ಸಮುದಾಯದ ವ್ರತ್ತಿಗೆ ಅನುಗುಣವಾಗಿ ಯಾವುದೇ ರೀತಿಯ ಸ್ಪಂದಿಸೋ ಕೆಲಸ ಬಿಜೆಪಿ ಸರ್ಕಾರ ಮಾಡಿಲ್ಲ. ಕಾಂಗ್ರೆಸ್ ಸರಕಾರ ನಿರಂತರವಾಗಿ ಮೀನುಗಾರರಿಗೆ ಸೀಮೆ ಎಣ್ಣೆ ಸಬ್ಸಿಡಿ ಕೊಡುವ ಕೆಲಸ ಮಾಡಿತ್ತು. ಕಳೆದ 6 ತಿಂಗಳಿಂದ ಸೀಮಯಣ್ಣೆ ಸಬ್ಸಿಡಿ ಸಿಗದೇ ಮೀನುಗಾರರು ಕಂಗಲಾಗಿದ್ದಾರೆ. ಕೇವಲ ವೋಟ್ ಬ್ಯಾಂಕ್ ಆಗಿ ಸುಳ್ಳುಗಳ ಸರಮಾಲೆಯನ್ನು ಸ್ರಷ್ಟಿಸಿ ಮೀನುಗಾರ ಸಮುದಾಯವನ್ನು ಹತ್ತಿಕ್ಕುವ ಕೆಲಸವನ್ನು ‌ಬಿಜೆಪಿ ಸರಕಾರ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ಅಶೋಕ್ ಕುಮಾರ್ ಕೊಡವೂರು, ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಜೆ ಶೆಟ್ಟಿ, ಟಿ. ಪ್ರತಾಪನ್, ದೇವಿ ಪ್ರಸಾದ್ ಶೆಟ್ಟಿ, ರಾಜಶೇಖರ ಕೋಟ್ಯಾನ್, ವಿಲ್ಸನ್ ರೋಡ್ರಿಗಸ್, ಮಂಜುನಾಥ ಬಿ ಸೊಣೆಗಾರ್, ಹರಿಶ್ ಕಿಣಿ, ರಮೀಜ್ ಹುಸೇನ್, ಅಬ್ದುಲ್ ಗಫೂರ್, ಜೀತೇಂದ್ರ ಫುಟಾರ್ಡೋ, ಶಾಂತಲಾ, ಶರ್ಪುದ್ದೀನ್ ಶೇಖ್, ವಿಶ್ವಾಸ್ ಅಮೀನ್, ದಿನೇಶ್ ಕೋಟ್ಯಾನ್, ಅಮೀರ್ ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ: ರೋಹಿತ್‌ ಶರ್ಮ IPLನಿಂದ ಕೆಲವು ಸಮಯ ವಿಶ್ರಾಂತಿ ತೆಗೆದುಕೊಳ್ಳಲಿ… ಗಾವಸ್ಕರ್‌ ಸಲಹೆ !

Advertisement

Udayavani is now on Telegram. Click here to join our channel and stay updated with the latest news.

Next