Advertisement

ಆನೆಗೆ ಗಾಯ ಕುರಿತಂತೆ ರಾಹುಲ್ ಗಾಂಧಿ ಪತ್ರಕ್ಕೆ ಸ್ಪಂದಿಸಲಾಗುವುದು: ಸಿಎಂ ಬೊಮ್ಮಾಯಿ

12:08 PM Oct 06, 2022 | Team Udayavani |

ಬೆಂಗಳೂರು: ನಾಗರಹೊಳೆ ಅರಣ್ಯದಲ್ಲಿ ಆನೆ ಮತ್ತು ಅದರ ಮರಿಗೆ ಬಾಲ ಮತ್ತು ಸೊಂಡಿಲಿನಲ್ಲಿ ಗಾಯವಾಗಿರುವ ಬಗ್ಗೆ ರಾಹುಲ್ ಗಾಂಧಿ ಅವರು ಪತ್ರ ಬರೆದಿದ್ದು, ಈ ಬಗ್ಗೆ ಸ್ಪಂದಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ನಾಗರಹೊಳೆ ಅರಣ್ಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ಇದನ್ನು ಗಮನಿಸಿದ್ದು, ಇನ್ನು ಅರ್ಧ ಗಂಟೆಯ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳ ಬಳಿ ಮಾತನಾಡಿ ಆನೆಗಳಿಗೆ ಏನೆಲ್ಲಾ ಚಿಕಿತ್ಸೆ ನೀಡಬಹುದು ಎಂದು ಪರಿಶೀಲನೆ ಮಾಡಲಾಗುವುದು. ಅವರು ಗಮನಕ್ಕೆ ತಂದಿರುವ ವಿಷಯದ ಬಗ್ಗೆ ಸ್ಪಂದಿಸಲಾಗುವುದು ಹಾಗೂ ಮಾನವೀಯ ದೃಷ್ಟಿಯಿಂದ ಅದರ ಅಗತ್ಯವೂ ಇದೆ ಎಂದರು.

ಯಾವುದೇ ಪರಿಣಾಮ ಬೀರಲ್ಲ: ಭಾರತ್ ಜೋಡೋ ಅಭಿಯಾನದಲ್ಲಿ ಸೋನಿಯಾ ಗಾಂಧಿ ಪಾಲ್ಗೊಂಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಸಹಜವಾಗಿ ಎಲ್ಲಾ ಪಕ್ಷದ ಮುಖ್ಯಸ್ಥರು ತಮ್ಮ ಪಕ್ಷಕ್ಕೆ ಕೆಲಸ ಮಾಡುತ್ತಾರೆ. ಸೋನಿಯಾ ಗಾಂಧಿ ಅರ್ಧ ಕಿ.ಮೀ ನಡೆದು ವಾಪಸ್ಸಾಗಿದ್ದಾರೆ. ಇದ್ಯಾವುದೂ ಪರಿಣಾಮವನ್ನು ಬೀರುವುದಿಲ್ಲ ಎಂದರು. ಪ್ರಿಯಾಂಕಾ ಗಾಂಧಿ ಅಭಿಯಾನದಲ್ಲಿ ಪಾಲ್ಗೊಳ್ಳುವುದಕ್ಕೂ ನಮಗೂ ಸಂಬಂಧ ಇಲ್ಲ, ಇದರಿಂದ ಯಾವ ಪರಿಣಾಮವೂ ಆಗುವುದಿಲ್ಲ ಎಂದರು.

ಇದನ್ನೂ ಓದಿ:ಆದಿಪುರುಷ್ ಚಿತ್ರವನ್ನು ಬ್ಯಾನ್ ಮಾಡಿ: ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕರ ಆಗ್ರಹ

ಆರು ರ್ಯಾಲಿಗಳು:  ಭಾರತ್ ಜೋಡೋ ಅಭಿಯಾನಕ್ಕೂ ಮುನ್ನವೇ ತೀರ್ಮಾನಿಸಿದಂತೆ ಬಿಜೆಪಿ ಆರು ರ್ಯಾಲಿಗಳನ್ನು ಕೈಗೊಳ್ಳಲಿದೆ. ಮಧ್ಯೆ ಅಧಿವೇಶನ ಹಾಗೂ ದಸರಾ ಇದ್ದುದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಜಂಟಿ ಪ್ರವಾಸವನ್ನು ಪ್ರಾರಂಭ ಮಾಡಲಿದ್ದೇವೆ ಎಂದರು.

Advertisement

ಪೊಲೀಸ್ ಹಲ್ಲೆ ಕುರಿತು ಪರಿಶೀಲನೆ: ಮಂಡ್ಯದಲ್ಲಿ ಪೊಲೀಸ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿ ಯಾರ ತಪ್ಪಿದೆ ಎಂದು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next